
ಈ ಜೋಡಿ ಸದ್ಯ ಸ್ಪೇನ್ನಲ್ಲಿ ಕಾಣಿಸಿಕೊಂಡಿದೆ. ಅನನ್ಯಾ ಹಾಗೂ ಆದಿತ್ಯ ಜೊತೆಯಾಗಿರುವ ಸಾಕಷ್ಟು ಫೋಟೋಗಳು ಲೀಕ್ ಆಗಿವೆ. ಆದಿತ್ಯ ರಾಯ್ ಕಪೂರ್ ಹಿಂಬದಿಯಿಂದ ಅನನ್ಯಾರನ್ನು ತಬ್ಬಿಕೊಂಡಿರುವ ಫೋಟೋಗಳು ವೈರಲ್ ಆಗಿದೆ.
ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ಇಬ್ಬರೂ ಸ್ಪೇನ್ನಲ್ಲಿ ಆರ್ಕ್ಟಿಕ್ ಮಂಕೀಸ್ನ ಫೋಟೋ ಶೇರ್ ಮಾಡಿದ ಬಳಿಕ ಇಬ್ಬರೂ ಜೋಡಿಯಾಗಿ ಇರುವ ಸಾಕಷ್ಟು ಫೋಟೋಗಳು ಲೀಕ್ ಆಗಿವೆ. ಲೀಕ್ ಆಗಿರುವ ಫೋಟೋಗಳಲ್ಲಿ ಇಬ್ಬರು ಜೋಡಿಯಾಗಿ ಸ್ಪೇನ್ನ ಸೌಂದರ್ಯ ಸವಿಯುತ್ತಿರೋದನ್ನು ಕಾಣಬಹುದಾಗಿದೆ.
ಜುಲೈ 11 ರಂದು ಅನನ್ಯಾ ತಮ್ಮ ಇನ್ನ್ಸ್ಟಾಗ್ರಾಂ ಖಾತೆಯಲ್ಲಿ ಸ್ಪೇನ್ನ ಕಾನ್ಸರ್ಟ್ ಒಂದರ ಫೋಟೋ ಹಂಚಿಕೊಂಡಿದ್ದರು. ಇದಾದ ಬಳಿಕ ಆದಿತ್ಯ ಕೂಡ ಇದೇ ಕಾನ್ಸರ್ಟ್ನ ಫೋಟೋ ಶೇರ್ ಮಾಡಿದ್ದರು.

