ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್ ಅಧಿಕಾರಿಗೆ ಏಸು ಕ್ರಿಸ್ತನ ಬದಲು ಅಂಬಾಭವಾನಿ ಫೋಟೋ ಇಟ್ಟು ಪೂಜೆ ಮಾಡುವಂತೆ ಒತ್ತಾಯಿಸಿ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್ ಅಧಿಕಾರಿ ಅಶ್ವಿನಿ ತುಕಾರಾಮ್ ಅವರಿಗೆ ಫೋಟೋ ಪೂಜೆ ಮಾಡಲು ಒತ್ತಾಯಿಸಲಾಗಿದ್ದು, ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಶ್ವಿನಿ ಅವರ ದೂರಿನ ಮೇರೆಗೆ ಹಿಂದೂ ಜಾಗೃತಿ ಸೇನೆ ತಾಲೂಕು ಅಧ್ಯಕ್ಷ ಶಂಕರ ಚೌಕ ಸೇರಿ 15 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಶ್ವಿನಿ ಅವರು ತಮ್ಮ ಕ್ವಾಟ್ರಸ್ ಮನೆಯಲ್ಲಿ ಕ್ರಿಸ್ತ ದೇವರ ಫೋಟೋ ಇರಿಸಿ ಪೂಜೆ ಮಾಡುತ್ತಿದ್ದರು. ಏಕಾಏಕಿ ಮನೆಗೆ ನುಗ್ಗಿದ ಶಂಕರ ಮತ್ತು ಅವರ ತಂಡ ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಲಾಗಿದೆ.