alex Certify ಸಕ್ಕರೆ ಬದಲು ಬೆಲ್ಲ ತಿಂದರೆ ಮಧುಮೇಹ ನಿಯಂತ್ರಿಸಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಬದಲು ಬೆಲ್ಲ ತಿಂದರೆ ಮಧುಮೇಹ ನಿಯಂತ್ರಿಸಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ

ದೇಶದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಮಧುಮೇಹ ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿರುವ ಕಾಯಿಲೆಗಳಲ್ಲೊಂದು. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲೇಬೇಕು. ಒಮ್ಮೆ ಮದುಮೇಹಕ್ಕೆ ತುತ್ತಾದರೆ ಸಿಹಿ ತಿನಿಸುಗಳಿಂದ ದೂರವಿರಬೇಕಾಗುತ್ತದೆ. ಮಧುಮೇಹ ರೋಗಿಗಳು ಸಕ್ಕರೆಯ ಬದಲಿಗೆ ಬೆಲ್ಲವನ್ನು ಸೇವಿಸಿದರೆ ಅವರ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ ಎನ್ನಲಾಗುತ್ತದೆ.

ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬ ಪ್ರಶ್ನೆ ರೋಗಿಗಳನ್ನು ಕಾಡುತ್ತದೆ. ಹಿಂದಿನ ಕಾಲದಲ್ಲಿ ಸಿಗುತ್ತಿದ್ದ ಬೆಲ್ಲ ಉತ್ತಮ ಗುಣಮಟ್ಟದ್ದಾಗಿರುತ್ತಿತ್ತು. ಆದರೆ ಈಗ ಸಿಗುತ್ತಿರುವ ಬೆಲ್ಲ ಸಕ್ಕರೆಗಿಂತ ಅಪಾಯಕಾರಿ. ಆದ್ದರಿಂದ ಬೆಲ್ಲ ತಿನ್ನುವುದನ್ನು ಕೂಡ ತಪ್ಪಿಸಬೇಕು.

ಸಕ್ಕರೆ ಕಾಯಿಲೆಯಂತಹ ಅಪಾಯಕಾರಿ ರೋಗಗಳಿಂದ ದೂರವಿರಲು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಬೇಕು. ಜೀವಸತ್ವಗಳು, ಖನಿಜಗಳು ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರ ಸೇವಿಸಿದರೆ  ಮಧುಮೇಹದ ಅಪಾಯವಿರುವುದಿಲ್ಲ.

ಇನ್ನು ಕೆಟ್ಟ ಜೀವನಶೈಲಿ ನಮ್ಮ ದೇಹವನ್ನು ಒಳಗಿನಿಂದ ಹಾಳುಮಾಡುತ್ತದೆ. ಇಂದಿನ ಕಾಲದಲ್ಲಿ ಮಲಗಲು ಮತ್ತು ಏಳಲು ಸರಿಯಾದ ಸಮಯವಿಲ್ಲ. ಇದರಿಂದ ಜನರು ವ್ಯಾಯಾಮ ಕೂಡ ಮಾಡುತ್ತಿಲ್ಲ. ಈ ರೀತಿಯ ಜಡ ಜೀವನಶೈಲಿಯಿದ್ರೆ ಸಕ್ಕರೆ ಕಾಯಿಲೆ ಬರುವ ಅಪಾಯ ಹೆಚ್ಚಾಗಿರುತ್ತದೆ.

ನಮ್ಮ ದೇಹದಲ್ಲಿ ವಿಪರೀತ ಕಫವು ರೂಪುಗೊಳ್ಳುತ್ತದೆ, ಆಗ ಅದು ಮಧುಮೇಹಕ್ಕೆ ಕಾರಣವಾಗಬಹುದು. ಇದರ ಚಿಕಿತ್ಸೆ ಆಯುರ್ವೇದದಿಂದ ಮಾತ್ರ ಸಾಧ್ಯ. ಮಾಲಿನ್ಯದ ತ್ವರಿತ ಹೆಚ್ಚಳದಿಂದಾಗಿ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಶುದ್ಧ ಗಾಳಿಯಲ್ಲಿ ಇರಲು ಪ್ರಯತ್ನಿಸಿ. ಮಧುಮೇಹ ರೋಗಿಗಳು ಹೆಚ್ಚು ಕ್ರಿಯಾಶೀಲರಾಗಿದ್ದರೆ ಅದರ ಪರಿಣಾಮ ಕಡಿಮೆ ಇರುತ್ತದೆ. ಹಾಗಾಗಿ ಸಾಧ್ಯವಾದಷ್ಟು ದೈಹಿಕವಾಗಿ ಸಕ್ರಿಯವಾಗಿರುವುದು ಮುಖ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...