ವಿಮಾನದಲ್ಲಿ ಪ್ರಯಾಣಿಸುವಾಗ ಹಲವರು ಫೋಟೋಗಳನ್ನು ಕ್ಲಿಕ್ಕಿಸಲು ಬಯಸುತ್ತಾರೆ, ಸುಂದರವಾದ ಮೋಡಗಳು, ಏರಿಯಲ್ ವ್ಯೂ ನಲ್ಲಿ ಭೂಮಿಯ ದೃಶ್ಯವನ್ನು ವಿಡಿಯೋ ಮೂಲಕ ಸೆರೆ ಹಿಡಿಯುತ್ತಾರೆ. ಇಂತಹ ವೇಳೆ ಮೊಬೈಲ್ ಕೈ ಜಾರಿ ಕೆಳಗೆ ಬಿದ್ದರೆ ? ಇಂತಹ ಪ್ರಸಂಗದ ಹಳೆಯ ವಿಡಿಯೋ ಮತ್ತೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದೆ.
ಚಾರ್ಟರ್ಡ್ ಪ್ಲೇನ್‌ನಲ್ಲಿರುವ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಕ್ಯಾಮೆರಾವನ್ನು ಬಳಸಿಕೊಂಡು ಸುಂದರವಾದ ಮೋಡಗಳು ಮತ್ತು ವಿಸ್ತಾರವಾದ ವೈಮಾನಿಕ ದೃಶ್ಯಾವಳಿಗಳನ್ನು ವೀಡಿಯೊ ಮಾಡುತ್ತಾ ಸೆರೆಹಿಡಿಯಲು ಪ್ರಾರಂಭಿಸುತ್ತಾನೆ. ಈ ವೇಳೆ ಅನಿರೀಕ್ಷಿತ ಕ್ಷಣವೊಂದು ಸಂಭವಿಸುತ್ತದೆ. ಫೋನ್ ಅವನ ಕೈಯಿಂದ ಜಾರಿ ಸಾವಿರಾರು ಅಡಿ ಕೆಳಗೆ ಬೀಳುತ್ತದೆ.
ಫೋನ್ ಕೆಳಗೆ ಬೀಳುವಾಗ ಕ್ಯಾಮೆರಾ ಆನ್ ಆಗಿದ್ದರಿಂದ ಎಲ್ಲಾ ದೃಶ್ಯವು ಸೆರೆಯಾಗಿದೆ. ಗಾಳಿಯ ರಭಸದ ಶಬ್ಧವೂ ರೆಕಾರ್ಡ್ ಆಗಿದೆ. ಕೊನೆಗೆ ಫೋನ್ ಹಂದಿಗಳ ವಾಸದ ಕೊಳಚೆ ಪ್ರದೇಶದಲ್ಲಿ ಬಿದ್ದಿದೆ. ಈ ವಿಡಿಯೋ ಇದೀಗ ಮತ್ತೆ ಕಾಣಿಸಿಕೊಂಡು ವೈರಲ್ ಆಗಿದೆ.