ರಾಯಚೂರು: ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿಚಾರಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಐವರು ಬಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇದು ಸಿಎಎ ಕಾಯ್ದೆಯಡಿ ಪೌರತ್ವ ನೀಡಿದ ರಾಜ್ಯದ ಮೊದಲ ಪ್ರಕರಣವಾಗಿದೆ.
ರಾಜ್ಯ ಗೃಹ ಸಚಿವಾಲಯದ ಜನಗಣತಿ ವಿಭಾಗದಿಂದ ರಾಯಚೂರಿನ ಆರ್ ಹೆಚ್ ಕ್ಯಾಂಪ್ ಗಳಲ್ಲಿ ನೆಲೆಸಿರುವ ಐವರಿಗೆ ಇದೀಗ ಭಾರತೀಯ ಪೌರತ್ವ ನೀಡಲಾಗಿದೆ. ಆರ್ ಹೆಚ್ ಕ್ಯಾಂಪ್ ನಲ್ಲಿ ಸುಮಾರು 20 ಸಾವಿರ ಬಾಂಗ್ಲಾ ವಲಸಿಗರು ಇದ್ದಾರೆ. ತಲೆಮಾರುಗಳ ಹಿಂದೆಯೇ ಇವರ ಪೂರ್ವಜರು ಬಾಂಗ್ಲಾದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದು, ಸದ್ಯ ರಾಯಚೂರಿನಲ್ಲಿ ವಾಸವಾಗಿದ್ದಾರೆ.
ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ರಾಯಚೂರಿನ ಸಿಂಧನೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಮಾಜಿ ಸಂಸದ ವಿರೂಪಾಕ್ಷಪ್ಪ ಮೂಲಕ ನಿರಾಶ್ರಿತರು ಭಾರತೀಯ ಪೌರತ್ವಕ್ಕಾಗಿ ಮನವಿ ಮಾಡಿದ್ದರು. ಅಲ್ಲದೇ ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದರು. ಇದೀಗ ಐವರುಇ ಬಾಂಗ್ಲ ಅವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ.
ರಾಮಕೃಷ್ಣ ಅಭಿಕರಿ, ಸುಕುಮಾರ ಮೊಂದಲ್, ಬಿಪ್ರವಾಸ, ಜಯಂತ ಮೊಂಡಲ್ ಹಾಗೂ ಅದ್ವಿತ್ ಎಂಬುವವರಿಗೆ ಭಾರತೀಯ ಪೌರತ್ವ ನೀಡಲಾಗಿದೆ.