ಅಕ್ರಮವಾಗಿ ಸಾಗಿಸುತ್ತಿದ್ದ 4.8 ಕೋಟಿ ರೂ. ಮೌಲ್ಯದ ಬರ್ಮಾ ಅಡಿಕೆ ವಶಕ್ಕೆ, ಮೂವರು ಅರೆಸ್ಟ್

ಗುವಾಹಟಿ: ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಅಸ್ಸಾಂ ರೈಫಲ್ಸ್ 4.8 ಕೋಟಿ ರೂ. ಮೌಲ್ಯದ ಬರ್ಮಾ ಅಡಿಕೆ ವಶಪಡಿಸಿಕೊಂಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 4.84 ಕೋಟಿ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಬರ್ಮಾ ಅಡಿಕೆಯನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದೆ. ಅಕ್ರಮ ವಹಿವಾಟಿನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ವೈನ್‌ವಿನ್, ತುಂಟುನ್ ಮತ್ತು ಆಂಗ್‌ಶುನ್ ಎಂದು ಗುರುತಿಸಲಾಗಿದೆ.

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಿಂದ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದೆ. ಇಂಡೋ-ಮ್ಯಾನ್ಮಾರ್ ಅಂತರಾಷ್ಟ್ರೀಯ ಗಡಿಯಲ್ಲಿರುವ ಸಂಕಲೋಕ್ ನಾಲಾ ಪ್ರದೇಶದಲ್ಲಿ ಮ್ಯಾನ್ಮಾರ್ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಮೂರು ವಾಹನಗಳಿಂದ ಅಸ್ಸಾಂ ರೈಫಲ್ಸ್ ಸೈನಿಕರು ಎರಡು ವಿಭಿನ್ನ ಕಾರ್ಯಾಚರಣೆಗಳಲ್ಲಿ ಶಂಕಿತ ಬರ್ಮಾ ಅಡಿಕೆಗಳ ಸರಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ನಿಷಿದ್ಧ ವಸ್ತುಗಳ ಸಾಗಣೆ ತಡೆ, ಶಂಕಿತ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಅಸ್ಸಾಂ ರೈಫಲ್ಸ್ ತಂಡವನ್ನು ಪ್ರಾರಂಭಿಸಲಾಗಿದೆ. ಎರಡು ಪ್ರಕರಣಗಳಲ್ಲಿ 4.84 ಕೋಟಿ ರೂ. ಮೌಲ್ಯದ ಅಡಿಕೆ ವಶಕ್ಕೆ ಪಡೆದಿದೆ.

ಮೂರು ಮ್ಯಾನ್ಮಾರ್ ಟ್ರಕ್‌ಗಳಲ್ಲಿ ಅಂತರರಾಷ್ಟ್ರೀಯ ಗಡಿಯ ಮೂಲಕ ಜನರಲ್ ಏರಿಯಾ ಸಂಗ್‌ಕಲೋಕ್ ನಾಲಾ ಟ್ರ್ಯಾಕ್‌ನಲ್ಲಿ ಅಕ್ರಮವಾಗಿ ಭಾರತಕ್ಕೆ ಅಡಿಕೆ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಅಸ್ಸಾಂ ರೈಫಲ್ಸ್‌ನ ಪತ್ರಿಕಾ ಹೇಳಿಕೆ ತಿಳಿಸಿದೆ.

ಬರ್ಮಾ ಅಡಿಕೆಯನ್ನು ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಲಾಗುತ್ತದೆ ಮತ್ತು ನಂತರ ಅಕ್ರಮವಾಗಿ ಭಾರತದ ಇತರ ಭಾಗಗಳಿಗೆ ಮತ್ತು ವಿದೇಶಗಳಿಗೆ ಸಾಗಿಸಲಾಗುತ್ತದೆ. ವ್ಯಾಪಾರದಲ್ಲಿ ತೊಡಗಿರುವ ಮಾಫಿಯಾಗಳು ಸಾಮಾನ್ಯವಾಗಿ ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ರೈಲ್ವೆಯನ್ನು ಸುರಕ್ಷಿತ ಸಾರಿಗೆಯಾಗಿ ಬಳಸುತ್ತಾರೆ.

ಕಳೆದ ಆರು ವರ್ಷಗಳಲ್ಲಿ, ಅಸ್ಸಾಂ ಮತ್ತು ಅದರ ನೆರೆಯ ರಾಜ್ಯಗಳಾದ ಮಿಜೋರಾಂ ಮತ್ತು ಮಣಿಪುರದ ಹಲವಾರು ಸ್ಥಳಗಳಲ್ಲಿ ಶಂಕಿತ ಬರ್ಮಾ ಅಡಿಕೆಗಳನ್ನು ತುಂಬಿದ ಟ್ರಕ್‌ಗಳು ಮತ್ತು ರೈಲು ವ್ಯಾಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read