alex Certify ಪತ್ನಿಗೆ ಮೊದಲೇ ಸಂದೇಶ ಕಳುಹಿಸಿದ್ದ ಯೋಧನ ಅನುಮಾನಾಸ್ಪದ ಸಾವು; ಅಷ್ಟಕ್ಕೂ ರೈಲಿನಲ್ಲಿ ನಡೆದಿದ್ದು ಏನು ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ಮೊದಲೇ ಸಂದೇಶ ಕಳುಹಿಸಿದ್ದ ಯೋಧನ ಅನುಮಾನಾಸ್ಪದ ಸಾವು; ಅಷ್ಟಕ್ಕೂ ರೈಲಿನಲ್ಲಿ ನಡೆದಿದ್ದು ಏನು ?

ಉತ್ತರ ಪ್ರದೇಶದ ಇಟಾಹ್‌ನಲ್ಲಿ ರಜೆಯ ಮೇಲೆ ಮನೆಗೆ ತೆರಳುತ್ತಿದ್ದ ಬಿಎಸ್‌ಎಫ್ ಯೋಧ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೂರು ದಿನಗಳ ಹಿಂದೆ, ಸರ್ಕಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಫಾಫಂಡ್ ರೈಲು ನಿಲ್ದಾಣದ ಬಳಿ ರಾಜಧಾನಿ ಎಕ್ಸ್‌ಪ್ರೆಸ್‌ನಿಂದ ಬಿದ್ದು ಬಿಎಸ್‌ಎಫ್ ಯೋಧ ಗಾಯಗೊಂಡಿದ್ದರು.

ಸೈಫೈ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ. ಜಿಆರ್‌ಪಿ ಯೋಧನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮಹಿಳೆ ಸೇರಿ ನಾಲ್ವರು ಅಪರಿಚಿತರ ವಿರುದ್ಧ ಕುಟುಂಬಸ್ಥರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಝಾನ್ಸಿ, ವಿಪುಲ್ ಶ್ರೀವಾಸ್ತವ ಅವರು ಘಟನಾ ಸ್ಥಳವನ್ನು ಪರಿಶೀಲಿಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಮೃತ ಕಾನ್ಸ್‌ಟೇಬಲ್ ತನ್ನ ಪತ್ನಿಗೆ ರೈಲಿನೊಳಗೆ ತಾನು ಕೊಲೆಯಾಗಬಹುದು ಅಥವಾ ದರೋಡೆಕೋರರ ಕೈಗೆ ಸಿಕ್ಕಿಬೀಳಬಹುದು ಎಂಬ ಸಂದೇಶ ನೀಡಿದ್ದ. ಒಬ್ಬ ಮಹಿಳೆ ಮತ್ತು ನಾಲ್ಕು ಜನರು ತನ್ನನ್ನು ರೈಲಿನಿಂದ ಎಸೆಯುವ ಸಾಧ್ಯತೆ ಇದೆ ಎಂದು ಸೈನಿಕ, ಪತ್ನಿಗೆ ಮೆಸ್ಸೇಜ್‌ ಮಾಡಿದ್ದ.

ಬಿಎಸ್‌ಎಫ್ ಯೋಧ, ಮೇಘಾಲಯದ ನಿವಾಸಿ ಎನ್ನಲಾಗಿದೆ. ಬುಧವಾರ ಮೃತದೇಹದೊಂದಿಗೆ ಕುಟುಂಬದವರು ಮೇಘಾಲಯಕ್ಕೆ ತೆರಳಿದ್ದಾರೆ. ಮೃತನ ಕಿರಿಯ ಸಹೋದರ, ಮಹಿಳೆ ಸೇರಿದಂತೆ ನಾಲ್ವರು ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...