
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಫಿಟ್ನೆಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ರಿಷಿ ಸುನಕ್ ಅವರು ಉಪವಾಸದ ವಿಶಿಷ್ಟ ವಿಧಾನವನ್ನು ಹೊಂದಿದ್ದಾರೆ. 36 ಗಂಟೆಗಳ ಕಾಲ ಬ್ರಿಟನ್ ಪ್ರಧಾನಿ ಉಪವಾಸ ಇರುತ್ತಾರೆ. ಭಾನುವಾರ ಸಂಜೆ 5 ಗಂಟೆಯಿಂದ ಮಂಗಳವಾರ ಬೆಳಗ್ಗೆ 5 ಗಂಟೆಯವರೆಗೆ ರಿಷಿ ಸುನಕ್ ಆಹಾರ ಸೇವಿಸುವುದಿಲ್ಲ. ಈ 36 ಗಂಟೆಗಳ ಉಪವಾಸದ ಸಮಯದಲ್ಲಿ ಅವರು ನೀರು, ಚಹಾ ಮತ್ತು ಕ್ಯಾಲೋರಿಮುಕ್ತ ಪಾನೀಯಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ.
ರಿಷಿ ಸುನಕ್ ಅವರ ಆಹಾರ ಪದ್ಧತಿ ಕಟ್ಟುನಿಟ್ಟಾಗಿದೆ. ವಾರವಿಡೀ ಟೇಸ್ಟಿ ತಿನಿಸುಗಳ ಸೇವನೆಯ ಬಳಿಕ ತಮ್ಮ ದೇಹಕ್ಕೆ ವಿಶ್ರಾಂತಿ ನೀಡಲು ವಾರಾಂತ್ಯದಲ್ಲಿ ಉಪವಾಸ ಮಾಡುತ್ತಾರೆ. ಹಾಗಂತ ಬ್ರಿಟನ್ ಪ್ರಧಾನಿ ಸಿಹಿ ತಿನಿಸುಗಳಿಂದ ದೂರವಿರುತ್ತಾರೆ ಎಂದುಕೊಳ್ಳಬೇಡಿ. ಅವರಿಗೆ ಸ್ವೀಟ್ಸ್ ಬಹಳ ಫೇವರಿಟ್.
ವಾರದ ಉಳಿದ ದಿನಗಳಲ್ಲಿ ರಿಷಿ ಸುನಕ್ ಬಹಳಷ್ಟು ಸಿಹಿಯಾದ ಪೇಸ್ಟ್ರಿಗಳನ್ನು ತಿನ್ನುತ್ತಾರೆ. ಕೆಲಸದ ಒತ್ತಡದಿಂದಾಗಿ ಅವರಿಗೆ ಮೊದಲಿನಷ್ಟು ವ್ಯಾಯಾಮ ಮಾಡಲು ಸಾಧ್ಯವಾಗುತ್ತಿಲ್ಲವಂತೆ. ಹಾಗಾಗಿ 36 ಗಂಟೆಗಳ ಉಪವಾಸವನ್ನು ತಪ್ಪಿಸುವುದಿಲ್ಲ.
ಕೆಲವೊಮ್ಮೆ ರಿಷಿ ಸುನಕ್ ಎರಡು ಬಾರಿ ಉಪಹಾರ ಸೇವಿಸ್ತಾರಂತೆ. ಬನ್, ಚಾಕೊಲೇಟ್ ಚಿಪ್ ಮಫಿನ್ ಕೂಡ ಬ್ರಿಟನ್ ಪ್ರಧಾನಿಗೆ ಬಹಳ ಪ್ರಿಯ. ಪ್ರಧಾನಿಯಾಗಿ ಬಿಡುವಿಲ್ಲದ ದಿನಚರಿಯ ನಡುವೆಯೂ ರಿಷಿ ಸುನಕ್ ಆರೋಗ್ಯದ ಕಡೆ ಗಮನ ಹರಿಸ್ತಾರೆ.
ಉಪವಾಸವು ದೇಹವನ್ನು ನಿರ್ವಿಷಗೊಳಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಮಿತವಾಗಿ ಮಾಡುವ ಉಪವಾಸವು ಕೆಲವರಿಗೆ ಪ್ರಯೋಜನಕಾರಿಯಾಗಿದೆ.