ಬ್ರಿಟಿಷ್ ಹೈಕಮೀಶನರ್ ಮುಂಬೈಕರ್ ಸ್ಟೈಲ್‌ನಲ್ಲಿ ತಿಂದಿದ್ದರು ಸ್ಪೆಷಲ್‌ ಫುಡ್‌; ಅದಕ್ಕೆ ನೆಟ್ಟಿಗರು ಹೇಳಿದ್ದೇನು ಗೊತ್ತಾ ?

ಬ್ರಿಟಿಷ್ ಹೈಕಮಿಶನರ್ ಅಲೆಕ್ಸ್, ಭಾರತಕ್ಕೆ ಭೇಟಿ ಕೊಟ್ಟಾಗೆಲ್ಲ ಅವರು ತಪ್ಪದೇ ಮಾಡುವ ಕೆಲಸ ಅಂದ್ರೆ, ಅವರು ಚಾಟ್ ಅಂಗಡಿಗೆ ಹೋಗಿ, ಅಲ್ಲಿ ಸಿಗುವ ವೆರೈಟಿ ವೆರೈಟಿ ಚಾಟ್ಸ್‌ಗಳನ್ನ ಬಾಯಿ ಚಪ್ಪರಿಕೊಂಡು ತಿನ್ತಾರೆ. ಅವರು ಈ ವಡಾಪಾವ್, ದೋಸೆ, ಸಮೋಸಾ, ಪಾನಿಪುರಿ, ಇಡ್ಲಿ  ವಡಾ ಹೀಗೆ ಒಂದಲ್ಲ ಒಂದು ರುಚಿರುಚಿಯಾದ ತಿಂಡಿಯನ್ನ ಹುಡ್ಕೊಂಡು ಹೋಗಿ ತಿನ್ನುತ್ತಾರೆ. ಈಗ ಇವರು ಮುಂಬೈಯಲ್ಲಿ ರಸ್ತೆಬದಿಯಲ್ಲಿ ಸಿಗುವ ಸ್ಯಾಂಡ್‌ವಿಚ್‌ ಹಾಗೂ ಚಿಲ್ಲಿ ಐಸ್ಕ್ರಿಮ್ ತಿಂದು ಎಲ್ಲರ ಗಮನ ಸೆಳೆದಿದ್ದಾರೆ.

ಭಾರತದ ಸಿಗುವ ಅನೇಕ ಬಗೆಯ ವಿಶೇಷ ಖಾದ್ಯಗಳು ವಿಶ್ವದ ಯಾವ ಮೂಲೆಯಲ್ಲಿಯೂ ಸಿಗೋಲ್ಲ. ಕೆಲ ವಿದೇಶಿ ಪ್ರವಾಸಿಗರಂತೂ ವಿಶೇಷ ತಿಂಡಿಗಳನ್ನ ಹುಡುಕಿಕೊಂಡು ಹೋಗಿ ತಿನ್ನುತ್ತಾರೆ. ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಕೂಡಾ ಅಂತಹವರಲ್ಲಿ ಒಬ್ಬರು. ಈ ಹಿಂದೆ ಬೆಂಗಳೂರಿನಲ್ಲಿ ಮಸಾಲೆ ದೋಸೆ ತಿಂದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದರು. ಈಗ ಮುಂಬೈನಲ್ಲಿ ಸಿಗುವ ಫೇಮಸ್ ಬಾಂಬೇ ಸ್ಯಾಂಡ್ವಿಚ್ ಹಾಗೂ ಚಿಲ್ಲಿ ಐಸ್ಕ್ರಿಮ್ ತಿಂದು, ಭಾರತದ ರುಚಿರುಚಿಕರ ಖಾದ್ಯವನ್ನ ಹಾಡಿಹೊಗಳಿದ್ದಾರೆ. ಅಷ್ಟೆ ಅಲ್ಲ ಅದನ್ನ ತಮ್ಮ ಟ್ವಿಟರ್ ಅಕೌಂಟ್‌ನಲ್ಲೂ ಶೇರ್ ಮಾಡ್ಕೊಂಡಿದ್ದಾರೆ.

ಅದಕ್ಕೆ ಶೀರ್ಷಿಕೆಯಲ್ಲಿ ಮುಂಬೈಕರ್ ಸ್ಟೈಲ್‌ನಲ್ಲಿ ಮರಾಠಿಯಲ್ಲಿ“ ತಿನ್ನೊದಾದ್ರೆ ಇಲ್ಲಿ ಬನ್ನಿ“ ಎಂದು ಬರೆದುಕೊಂಡಿದ್ಧಾರೆ.

#ಬಾಂಬೆ ಸ್ಯಾಂಡ್ವಿಚ್, ಚಿಲ್ಲಿ ಐಸ್ಕ್ರಿಮ್, ಇವತ್ತಿಗೆ ತಾನೊಬ್ಬ #ಮುಂಬೈಕರ್ನಂತೆ ತಿನ್ನುತ್ತಿದ್ದೇನೆ ಎಂದು ಬರೆದುಕೊಂಡಿದ್ದನ್ನ ಇಲ್ಲಿ ಗಮನಿಸಬಹುದು. ಅಲೆಕ್ಸ್ ಶೇರ್ ಮಾಡಿಕೊಂಡಿರುವ ಈ ವಿಡಿಯೋವನ್ನ ಈಗಾಗಲೇ ಐದು ಸಾವಿರಕ್ಕೂ ಜನರು ನೋಡಿ ಇಷ್ಟಪಟ್ಟಿದ್ದಾರೆ.

ಕೆಲ ನೆಟ್ಟಿಗರು ಅಲೆಕ್ಸ್ ಭಾರತದ ಆಹಾರ ಪದ್ದತಿ ಬಗ್ಗೆ ಹೇಳಿರುವುದು ಖುಷಿಯ ವಿಚಾರ ಎಂದು ಹೇಳಿದ್ಧಾರೆ. ಇನ್ನೂ ಕೆಲವರು ಅಲೆಕ್ಸ್ ಅವರಿಗೆ ಭಾರತದಲ್ಲಿ ಸಿಗುವ ವಿಶೇಷ ಬಗೆಯ ಖಾದ್ಯಗಳು ಯಾವುದು? ಅದು ಎಲ್ಲಿ ಸಿಗುತ್ತೆ ಅನ್ನುವುದರ ವಿವರಣೆ ಬರೆದಿದ್ದಾರೆ.

https://twitter.com/AlexWEllis/status/1613468424788905988?ref_src=twsrc%5Etfw%7Ctwcamp%5Etweetembed%7Ctwterm%5E16134684247889

https://twitter.com/Bobysha92730489/status/1613484436435369984?ref_src=twsrc%5Etfw%7Ctwcamp%5Etweetembed%7Ctwterm%5E1613484436435369984%7Ctwgr%5E50dca31eee1f883c539b8d7108560aefec9a5f32%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbritish-high-commissioner-to-india-alex-ellis-enjoys-snacks-from-mumbai-stall-see-post-2320726-2023-01-12

https://twitter.com/yeshveer87/status/1613473766155382784?ref_src=twsrc%5Etfw%7Ctwcamp%5Etweetembed%7Ctwterm%5E1613473766155382784%7Ctwgr%5E50dca31eee1f883c539b8d7108560aefec9a5f32%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbritish-high-commissioner-to-india-alex-ellis-enjoys-snacks-from-mumbai-stall-see-post-2320726-2023-01-12

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read