ಮಟನ್ ಊಟಕ್ಕಾಗಿ ಪಟ್ಟು ಹಿಡಿದ ವರ; ಮದುವೆ ರದ್ದುಗೊಳಿಸಿದ ವಧು….!

ಮಟನ್ ಊಟಕ್ಕಾಗಿ ಪಟ್ಟು ಹಿಡಿದ ವರನ ನಡೆಗೆ ಬೇಸತ್ತು ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಇಂತಹ ವಿಲಕ್ಷಣ ಘಟನೆ ಒಡಿಶಾದ ಸಂಬಲ್‌ಪುರದಲ್ಲಿ ನಡೆದಿದೆ. ಘಟನೆಯಿಂದಾಗಿ ಸುಂದರ್‌ಗಡ್‌ನ ವರ ಬರಿಗೈಯಲ್ಲಿ ಮನೆಗೆ ವಾಪಸ್ಸಾಗಿದ್ದಾರೆ.

ವರದಿಗಳ ಪ್ರಕಾರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉದ್ಯೋಗಿ ಆಗಿರುವ ವರನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೆರವಣಿಗೆ ಮೂಲಕ ಸಂಬಲ್‌ಪುರದ ಐಂತಪಾಲಿಯಲ್ಲಿರುವ ವಧುವಿನ ಮನೆಗೆ ತಲುಪಿದನು. ವರನ ಕಡೆಯವರಿಗಾಗಿ ಮಟನ್ ಊಟ ಮಾಡಿಸಲಾಗಿತ್ತು. ಆದರೆ ಇನ್ನೂ ಏಳೆಂಟು ಜನ ಊಟ ಮಾಡಬೇಕಾಗಿತ್ತು. ಅಷ್ಟೊತ್ತಿಗಾಗಲೇ ಮಟನ್ ಊಟ ಖಾಲಿಯಾಗಿತ್ತು. ಇದರಿಂದ ವರನ ಕಡೆಯವರು ದೊಡ್ಡ ಗಲಾಟೆ ಮಾಡಿದರು.

ಆಗಲೇ ತಡರಾತ್ರಿ ಆಗಿದ್ದರಿಂದ ವಧುವಿನ ಮನೆಯವರು ಮಾಂಸದೂಟ ವ್ಯವಸ್ಥೆ ಮಾಡುವಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು. ಆದರೆ ವರ ಮಾತ್ರ ಮಟನ್ ಊಟಕ್ಕಾಗಿ ಪಟ್ಟು ಹಿಡಿದ. ವಧುವಿನ ತಂದೆ ಆತನ ಕಾಲು ಹಿಡಿದು ಬೇಡಿಕೊಂಡರೂ ಪಟ್ಟು ಬಿಡಲಿಲ್ಲ. ಕೋಳಿ ಮತ್ತು ಮೀನೂಟ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದನ್ನು ಕಂಡ ವಧು ಮದುವೆ ರದ್ದುಗೊಳಿಸಿದಳು. ತಾಳಿ ಕಟ್ಟಲು ಹೋಗಿದ್ದ ವರ ಬರಿಗೈಯಲ್ಲಿ ಮನೆಗೆ ವಾಪಸ್ಸಾದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read