ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಾಲಿವುಡ್ ನಟ ನಟಿಯರಿಗೆ ಬಿಗ್ ಶಾಕ್ ನೀಡಿದ್ದು, ಹಲವು ಬಾಲಿವುಡ್ ನಟ-ನಟಿಯರ ಮೇಲೆ ಇಡಿ ದಾಳಿ ನಡೆಸಿದೆ.
ಹೌದು, ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಇಡಿ ರೇಡ್ ನಲ್ಲಿದ್ದಾರೆ. ಬಾಲಿವುಡ್ ನಟರಾದ ಟೈಗರ್ ಶ್ರಾಫ್, ಸನ್ನಿ ಲಿಯೋನ್, ಕೃತಿ ಕರಬಂಧ, ಗಾಯಕರಾದ ನೇಹಾ ಕಕ್ಕಡ್, ಅತಿಫ್ ಅಸ್ಲಂ, ರಾಹತ್ ಫತೇ ಅಲಿ ಖಾನ್, ವಿಶಾಲ್ ದದ್ಲಾನಿ, ಸೇರಿದಂತೆ ಹಲವರು ಜಾರಿ ನಿರ್ದೇಶನಾಲಯದ ಬಲೆಗೆ ಬೀಳುವ ಸಾಧ್ಯತೆಯಿದೆ.
ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ವಿಶಾಲ್ ದದ್ಲಾನಿ, ಕೃಷ್ಣ ಅಭಿಷೇಕ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಅದರಲ್ಲಿ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ, ಅನೇಕ ಸೆಲೆಬ್ರಿಟಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಕೋಲ್ಕತಾ, ಭೋಪಾಲ್, ಮುಂಬೈ ಮುಂತಾದ ನಗರಗಳಲ್ಲಿ ಮಹಾದೇವ್ ಆಪ್ ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಜಾಲಗಳ ವಿರುದ್ಧ ನಾವು ಶೋಧ ನಡೆಸಿದ್ದೇವೆ. 417 ಕೋಟಿ ಮೌಲ್ಯದ ಹಣ ಹಾಗೂ ಭಾರಿ ಮೊತ್ತದ ಚಿನ್ನಾಭರಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಮೂಲಗಳ ಪ್ರಕಾರ, ಇಡಿ ಇದುವರೆಗೆ ರಾಜ್ಯದ 39 ಸ್ಥಳಗಳಲ್ಲಿ ಶೋಧ ನಡೆಸಿದೆ. ಈ ಕ್ರಮವು ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಈಗ ಪ್ರಮುಖ ಕ್ರಮ ಕೈಗೊಂಡಿದೆ. ಬಾಲಿವುಡ್ ಸೆಲೆಬ್ರಿಟಿಗಳು ವಿದೇಶದಲ್ಲಿ ನಡೆದ ದೊಡ್ಡ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರನ್ನು ಖಾಸಗಿ ವಿಮಾನದಿಂದ ಮದುವೆಗೆ ಕರೆದೊಯ್ಯಲಾಯಿತು ಎಂಬ ಮಾಹಿತಿಯೂ ಹೊರಬಂದಿದೆ. ದುಬೈನಲ್ಲಿ ನಡೆದ ಮದುವೆಗೆ ತೆರಳಲು ನಾಗಪುರದಿಂದ ಹಲವು ಖಾಸಗಿ ಜೆಟ್ಗಳನ್ನು ಬುಕ್ ಮಾಡಲಾಗಿದ್ದು, ದುಬೈನಲ್ಲಿ ಹೋಟೆಲ್ಗಳಿಗೆ 40 ಕೋಟಿ ಖರ್ಚು ಮಾಡಲಾಗಿತ್ತಂತೆ. ಮದುವೆಗೆ ಖರ್ಚು ಮಾಡಿದ ನೂರಾರು ಕೋಟಿ ಹಣವನ್ನು ಹವಾಲಾ ಮೂಲಕವೇ ನೀಡಲಾಗಿತ್ತು ಎಂದು ಇಡಿಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.