BREAKING : ʻಸಿಎಂ ಜನತಾ ದರ್ಶನʼ : 6 ತಿಂಗಳʼ ಮಗುವಿನ ಹೃದಯದಲ್ಲಿ ರಂಧ್ರ, ಚಿಕಿತ್ಸೆಗೆ ಸ್ಥಳದಲ್ಲೇ ಸಿದ್ದರಾಮಯ್ಯ 2 ಲಕ್ಷ ರೂ. ಮಂಜೂರು

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇಡೀ ದಿನ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.

ಅಂಜಲಿ ಕುಂಬಾರ ಎಂಬುವರ ಆರು ತಿಂಗಳ ಮಗು ಮೇಘಾಶ್ರೀ ಎರಡು ಕಾಲುಗಳ ಅಂಗವೈಕಲ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯದಲ್ಲಿನ ರಂಧ್ರದ ಚಿಕಿತ್ಸೆಗೆ ನೆರವು ನೀಡುವಂತೆ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿದರು.

ಮಗುವಿನ ಪೋಷಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸ್ಥಳದಲ್ಲೇ 2 ಲಕ್ಷ ರೂ. ಮಂಜೂರು ಮಾಡಿ, ಬದುಕಿ ಬಾಳಬೇಕಾದ ಎಳೆಯ ಕಂದಮ್ಮನ ಬದುಕಿಗೆ ಭರವಸೆ ತುಂಬಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read