ಬೆಂಗಳೂರು : ಬೆಂಗಳೂರಿನಲ್ಲಿ ಎನ್ ಐ ಎ (NIA) ದಾಳಿ ವೇಳೆ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿದೆ.
ಶಮೀವುಲ್ಲಾ ಎಂಬುವವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 7 ಕೆಜಿ ಸೋಡಿಯಂ ನೈಟ್ರೇಟ್ ನ್ನು ಎನ್ ಐ ಎ ವಶಕ್ಕೆ ಪಡೆದುಕೊಂಡಿದೆ. ಈತ ಇಷ್ಟೊಂದು ಪ್ರಮಾಣದಲ್ಲಿ ಸೋಡಿಯಂ ನೈಟ್ರೇಟ್ ಯಾಕೆ ಇಟ್ಟುಕೊಂಡಿದ್ದನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬ್ಯಾಡರಹಳ್ಳಿಯ ಪ್ರಕೃತಿ ನಗರದ ಶಮೀವುಲ್ಲಾ ಎಂಬಾತನ ಮನೆಯಲ್ಲಿ ಸ್ಪೋಟಕ ತಯಾರಿಕೆಗೆ ಬಳಸುವ ನೈಟ್ರೇಟ್ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಶಂಕಿತ ಉಗ್ರ ಅಲಿ ಅಬ್ಬಾಸ್ ಬಂಧನ ಬೆನ್ನಲ್ಲೇ ಎನ್ ಐಎ ಅಧಿಕಾರಿಗಳು ಸರಣಿ ದಾಳಿ ಮುಂದುವರೆಸಿದ್ದು, ಇಂದು ಕೂಡ ಎನ್ ಐಎ ಅಧಿಕಾರಿಗಳಿಗಳಿಂದ ಹಲವೆಡೆ ದಾಳಿ ನಡೆದಿದೆ.. ಶಿವಾಜಿನಗರ, ಪುಲಕೇಶಿ ನಗರ, ಸುಲ್ತಾನ್ ಪಾಳ್ಯ, ಆರ್.ಟಿ.ನಗರ, ಜೆ.ಸಿ.ನಗರದ ಚನ್ನಪ್ಪ ಗಾರ್ಡನ್ ಸೇರಿಂದತೆ ಬೆಂಗಳೂರಿನ 20ಕ್ಕೂ ಹೆಚ್ಚು ಕಡೆಗಳಲ್ಲಿ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.