BREAKING: ಕೇಸರಿ ಪಾಳಯದಲ್ಲಿ ಸಂಚಲನ ಮೂಡಿಸಿದ ಅಮಿತ್ ಶಾ ನಡೆ; ವಿಜಯೇಂದ್ರಗೆ ಬೆನ್ನು ತಟ್ಟಿ ಆಲಂಗಿಸಿದ ಚುನಾವಣಾ ಚಾಣಾಕ್ಯ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಉಪಹಾರ ಕೂಟ ಆಯೋಜಿಸಲಾಗಿದ್ದು, ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆ ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.

ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಯಡಿಯೂರಪ್ಪನವರು ಹೂಗುಚ್ಛ ನೀಡಿ ಸ್ವಾಗತಿಸಲು ಮುಂದಾದರು. ಈ ವೇಳೆ ಆ ಹೂ ಗುಚ್ಛವನ್ನು ವಿಜಯೇಂದ್ರ ಕೈಗೆ ಕೊಡುವಂತೆ ಖುದ್ದು ಅಮಿತ್ ಶಾ ಯಡಿಯೂರಪ್ಪಗೆ ಸೂಚಿಸಿದರು. ಚಕಿತರಾದ ಯಡಿಯೂರಪ್ಪ ತಮ್ಮ ಬಳಿ ಇದ್ದ ಹೂಗುಚ್ಛವನ್ನು ವಿಜಯೇಂದ್ರಗೆ ನೀಡಿದರು. ವಿಜಯೇಂದ್ರ, ಅಮಿತ್ ಶಾ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸುತ್ತಿದ್ದಂತೆ ಅಮಿತ್ ಶಾ ಸಂತೋಷದಿಂದ ವಿಜಯೇಂದ್ರ ಬೆನ್ನು ತಟ್ಟಿ ಆಲಂಗಿಸಿದರು.

ಅಮಿತ್ ಶಾ ನಡೆ ಕಂಡು ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮುಖದಲ್ಲಿ ಮಂದಹಾಸ…ಸಂತಸ… ಬಳಿಕ ಯಡಿಯೂರಪ್ಪನವರು ಪ್ರತ್ಯೇಕವಾಗಿ ಹೂಗುಚ್ಛ ನೀಡಿ ಅಮಿತ್ ಶಾ ಅವರನ್ನು ಬರಮಾಡಿಕೊಂಡರು. ಸ್ವತಃ ಅಮಿತ್ ಶಾ ಅವರೇ ವಿಜಯೇಂದ್ರ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು, ರಾಜ್ಯ ಬಿಜೆಪಿಯಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read