ಬಳ್ಳಾರಿ : ರಾಹುಲ್ ಗಾಂಧಿ, ಉದಯನಿಧಿ ಸ್ಟಾಲಿನ್ ಇಬ್ಬರೂ ಪಪ್ಪುಗಳೇ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವಾಗ್ಧಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ಸನಾತನ ಧರ್ಮದ ಬಗ್ಗೆ ಮಾತನಾಡುವ ಉದಯ ನಿಧಿಗೆ ಸನಾತನ ಧರ್ಮದ ಬಗ್ಗೆ ಏನು ಗೊತ್ತು..? ರಾಹುಲ್ ಗಾಂಧಿಯೂ ಸಹ ಉದಯ ನಿಧಿ ತರಹನೇ ಪಪ್ಪು ಎಂದು ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿಕೊಂಡು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ, ಮನಸ್ಸು ಮಾಡಿದ್ರೆ ತಮಿಳುನಾಡಿಗೆ ನೀರು ಬಿಡದೇ ಮುಂದೂಡಬಹುದಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಈ ಕೆಲಸ ಮಾಡಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಮಹಾಭಾರತ ಕಾಲದಿಂದಲೂ ನಮ್ಮ ದೇಶಕ್ಕೆ ಭಾರತ ಎಂಬ ಹೆಸರಿದೆ. ದೇಶಕ್ಕೆ ಇಂಡಿಯಾ ಎಂಬುದು ಬ್ರಿಟಿಷರು ಇಟ್ಟಿರುವ ಹೆಸರು ಎಂದಿದ್ದಾರೆ.