ಬೆಂಗಳೂರು : ಬೆಂಗಳೂರಿನ 60 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಸಮಗ್ರ ತನಿಖೆಗೆ ಕೂಡ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಉತ್ತರ ವಲಯ -1ರಲ್ಲಿ 4 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ.ಬೆಂಗಳೂರಿನಉತ್ತರ ವಲಯ – 2ರಲ್ಲಿ 2 ಶಾಲೆಗಳಿಗೆ. ಬೆಂಗಳೂರಿನ ಉತ್ತರ ವಲಯ -4: 01 ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ.
ಬೆಂಗಳೂರಿನ ದಕ್ಷಿಣ ವಲಯ
ಬೆಂಗಳೂರಿನ ದಕ್ಷಿಣ ವಲಯ – 1: 15 ಶಾಲೆಗಳಿಗೆ ಬೆದರಿಕೆ ಇಮೇಲ್ಬೆಂಗಳೂರಿನ ದಕ್ಷಿಣ ವಲಯ – 2: 03 ಶಾಲೆಗಳು. ಬೆಂಗಳೂರಿನ ದಕ್ಷಿಣ ವಲಯ – 3: 10 ಶಾಲೆಗಳು ಬೆಂಗಳೂರಿನ ದಕ್ಷಿಣ ವಲಯ 4: 04 ಶಾಲೆಗಳು
ಸರ್ಜಾಪುರದ ಐದು ಶಾಲೆಗಳಿಗೆ ಬಾಂಬ್ ಬೆದರಿಕೆ
ಗ್ರೀನ್ ಹುಡ್ ಇಂಟರ್ನ್ಯಾಷನಲ್ ಹೈಸ್ಕೂಲ್
ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ
ಓಕರಿಡ್ಜ್ ಶಾಲೆ
ಟಿ ಐ ಎಸ್ ಬಿ ಶಾಲೆ
ಇನ್ವೆಂಚರ್ ಅಕಾಡೆಮಿ
ಜಿಗಣಿಯ ಎರಡು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ
ಅಚೀವರ್ಸ್ ಅಕಾಡೆಮಿ
ಎನ್ಡೆವರ್ಸ್ ಅಕಾಡೆಮಿ
ಬನ್ನೇರುಘಟ್ಟದ 7 ಶಾಲೆಗಳಿಗೆ ಬಾಂಬ್ ಬೆದರಿಕೆ
ಗ್ರೀನ್ ಹುಡ್ ಹೈಸ್ಕೂಲ್, ದಿನ್ನೇಪಾಳ್ಯ
ಗ್ಲೋಬಲ್ ಇಂಟರ್ನ್ಯಾಷನಲ್ ಶಾಲೆ
ರಾಯನ್ ಇಂಟರ್ನ್ಯಾಷನಲ್ ಶಾಲೆ
ಆಲ್ ಬಷೀರ್ ಶಾಲೆ
ದೀಕ್ಷಾ ಹೈಟ್ ಶಾಲೆ
ಕಾಂಡರ್ ಇಂಟರ್ನ್ಯಾಷನಲ್ ಶಾಲೆ
ಬಿವಿಎಂ ಗ್ಲೋಬಲ್ ಶಾಲೆ
ಹೆಬ್ಬಗೋಡಿಯ ನಾಲ್ಕು ಶಾಲೆಗಳಿಗೆ ಬೆದರಿಕೆ
ಡಿವೈನ್ ಇಂಟರ್ನ್ಯಾಷನಲ್ ಶಾಲೆ
ಟ್ರೀಮೈಸ್ ಇಂಟರ್ನ್ಯಾಷನಲ್ ಶಾಲೆ
ಫ್ಲಾರೆನ್ಸ್ ಇಂಟರ್ನ್ಯಾಷನಲ್ ಶಾಲೆ
ಎಬೆನ್ಸರ್ ಇಂಟರ್ನ್ಯಾಷನಲ್ ಶಾಲೆ
ಅನೇಕಲ್ನ 05 ಶಾಲೆಗಳಿಗೆ ಸೇರಿದಂತೆ ಒಟ್ಟು 44 ಖಾಸಗಿ ಶಾಲೆಗಳ ಇಮೇಲ್ಗೆ ಬಾಂಬ್ ಬೆದರಿಕೆ ಬಂದಿದೆ.
ಮುಜಾಹಿದ್ದೀನ್ ಹೆಸರಲ್ಲಿ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ‘ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಾಗಿ, ಇಲ್ಲ ಸಾಯಲು ಸಿದ್ಧರಾಗಿ. ನಿಮ್ಮನ್ನು ಹಾಗೂ ನಿಮ ಮಕ್ಕಳನ್ನು ಸಾಯಿಸುತ್ತೇವೆ. ನೀವೆಲ್ಲರೂ ಅಲ್ಲಾಹು ವಿರೋಧಿಗಳು. ಸಾಯಲು ಸಿದ್ಧರಾಗಿ’ ಎಂದು ಬೆದರಿಕೆ ಹಾಕಲಾಗಿದೆ.