ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ವೇಳೆಯಲ್ಲಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾದ ಘಟನೆ ಡಿಸೆಂಬರ್ 25 ರಂದು ಬೆಳಗಿನ ಜಾವ ನಡೆದಿದೆ.
ಮಲ್ಪೆ ಬಂದರಿನಿಂದ 13 ನಾಟಿಕಲ್ ಮೈಲು ದೂರದಲ್ಲಿ ಘಟನೆ ನಡೆದಿದೆ. ಅಂಕೋಲ ತಾಲೂಕಿನ ಕೃಷ್ಣ ನಾಪತ್ತೆಯಾಗಿದ್ದು, ಮೂರು ದಿನವಾದರೂ ಸುಳಿವು ಪತ್ತೆಯಾಗಿಲ್ಲ. ಮೀನುಗಾರಿಕೆ ವೇಳೆಯಲ್ಲಿ ಆಯತಪ್ಪಿ ಬೋಟ್ ನಿಂದ ಅವರು ಬಿದ್ದಿದ್ದು, ನಿರಂತರ ಹುಡುಕಾಟ ನಡೆಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.