ದಸರಾ ಹಬ್ಬದ ಹೊತ್ತಲ್ಲೇ ನಿಗಮ, ಮಂಡಳಿ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ

ಬೆಂಗಳೂರು: ದಸರಾ ಹಬ್ಬದ ಹೊತ್ತಲ್ಲೇ ನಿಗಮ, ಮಂಡಳಿ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಕ್ಟೋಬರ್ 25ರ ಬಳಿಕ ನಿಗಮ ಮಂಡಳಿಗಳ ನೇಮಕಾತಿ ಮತ್ತು ನೂತನ ಕಾರ್ಯಾಧ್ಯಕ್ಷರ ನೇಮಕಾತಿ ಬಗ್ಗೆ ಕಾಂಗ್ರೆಸ್ ನಾಯಕರ ಸಭೆ ನಯಲಿದೆ.

ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷದ ಕಚೇರಿಯಲ್ಲಿ ಮಾತನಾಡಿ, ಅ. 25 ರ ನಂತರ ನಿಗಮ ಮಂಡಳಿ ನೇಮಕಾತಿ, ಕಾರ್ಯಾಧ್ಯಕ್ಷರ ನೇಮಕಾತಿ ಬಗ್ಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ನೀಡಬೇಕೆಂಬ ಹಂಬಲ ನಮಗೂ ಇದೆ. ಮುಖ್ಯಮಂತ್ರಿಗಳೊಂದಿಗೆ ಅಕ್ಟೋಬರ್ 20ರಂದು ಮೊದಲ ಸುತ್ತಿನ ಮಾತುಕತೆಗೆ ಸಭೆ ನಿಗದಿಯಾಗಿತ್ತು. ಬೇರೆ ಕೆಲಸಗಳ ನಿಮಿತ್ತ ಚರ್ಚೆಯಾಗಲಿಲ್ಲ. ಹಬ್ಬ ಮುಗಿದ ನಂತರ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read