ಬೆಂಗಳೂರು: ಬಿಎಂಟಿಸಿ ರಾತ್ರಿ ಪಾಳಿ ಬಸ್ ಗಳಲ್ಲಿ ಒನ್ ಅಂಡ್ ಆಫ್ ಟಿಕೆಟ್ ರದ್ದುಪಡಿಸಲಾಗಿದ್ದು, ಏಕರೂಪ ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬಿಎಂಟಿಸಿ ಬಸ್ ಗಳಲ್ಲಿ ರಾತ್ರಿ ಪಾಳಿಯಲ್ಲಿ ಹೆಚ್ಚುವರಿ ಟಿಕೆಟ್ ಶುಲ್ಕ ತೆಗೆದುಕೊಳ್ಳುವ ವ್ಯವಸ್ಥೆ ರದ್ದು ಮಾಡಿ, ಇಡೀ ದಿನ ಆಯಾ ಬಸ್ ಗಳ ಸೇವೆಗೆ ತಕ್ಕಂತೆ ಏಕರೂಪ ಟಿಕೆಟ್ ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬಿಎಂಟಿಸಿ ರಚನೆಯಾಗಿ 25 ವರ್ಷ ಪೂರ್ಣಗೊಂಡಿದ್ದು, ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಎಂಟಿಸಿ ಸೇವೆ ಸೇರಿ ಇನ್ನಿತರೆ ಮಾಹಿತಿ ನೀಡುವ ಮೊಬೈಲ್ ಆಪ್ ಬಿಡುಗಡೆ ಮಾಡಲಾಗುವುದು. ಏಕರೂಪ ಟಿಕೆಟ್ ದರ ನಿಗದಿ ಮಾಡಲಾಗುವುದು. ರಾತ್ರಿ ಪಾಳಿ ಬಸ್ ಗಳಲ್ಲಿ ಮಾಮೂಲಿ ದರದ ಶೇಕಡ 50ರಷ್ಟು ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡುತ್ತಿದ್ದು, ಅದನ್ನು ರದ್ದು ಮಾಡಿ ಎಲ್ಲಾ ಅವಧಿಯಲ್ಲಿಯೂ ಏಕರೂಪ ಟಿಕೆಟ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.