BIG NEWS : ಮುಂಬೈನಲ್ಲಿ ‘ಅಗ್ನಿವೀರ್’ ತರಬೇತಿ ಪಡೆಯುತ್ತಿದ್ದ ಯುವತಿ ಆತ್ಮಹತ್ಯೆ

ಮುಂಬೈನ ಐಎನ್ಎಸ್ ಹಮ್ಲಾದಲ್ಲಿ ನೌಕಾಪಡೆಯ ತರಬೇತಿ ಪಡೆಯುತ್ತಿದ್ದ ಕೇರಳದ 20 ವರ್ಷದ ಮಹಿಳೆ ಸೋಮವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಅಪರ್ಣಾ ನಾಯರ್ ಎಂದು ಗುರುತಿಸಲಾಗಿದ್ದು, ಅವರು ಸುಮಾರು ಎರಡು ವಾರಗಳ ಹಿಂದೆ ಮುಂಬೈಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಯರ್ 15-20 ಬಾಲಕಿಯರೊಂದಿಗೆ ಮಾಲ್ವಾನಿಯ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದರು ಎಂದು ಮಾಲ್ವಾನಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಚಿಮಾಜಿ ಅಧವ್ ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಸೋಮವಾರ ಬೆಳಿಗ್ಗೆ, ನಾಯರ್ ಅವರ ರೂಮ್ಮೇಟ್ ಬೆಳಿಗ್ಗೆ 10.30 ಕ್ಕೆ ಅವರ ಕೋಣೆಗೆ ಮರಳಿದ್ದು, ಪದೇ ಪದೇ ಬಾಗಿಲು ಬಡಿದರೂ, ನಾಯರ್ ಬಾಗಿಲು ತೆರೆಯಲಿಲ್ಲ , ಇದರಿಂದ ಗಾಬರಿಗೊಂಡ ರೂಮ್ ಮೇಟ್ ಇತರರಿಗೆ ಮಾಹಿತಿ ನೀಡಿದರು ಮತ್ತು ನಂತರ ಬಾಗಿಲು ಮುರಿದು ಒಳಗಡೆ ನುಗ್ಗಿದಾಗ ನಾಯರ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read