ಪಾಟ್ನಾ: ಹತ್ತಾರು ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಬುಧವಾರ ಬಿಹಾರದ ಸರನ್ ನಲ್ಲಿ ಸರಯೂ ನದಿಯಲ್ಲಿ ಮುಳುಗಿದೆ.
ಇಲ್ಲಿಯವರೆಗೆ 3 ಮೃತದೇಹಗಳು ಪತ್ತೆಯಾಗಿದ್ದು, 6 ಮಂದಿಯನ್ನು ರಕ್ಷಿಸಲಾಗಿದೆ. 9 ಜನ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಂಜಿಯ ಮಟಿಯಾರ್ ಘಾಟ್‌ನಲ್ಲಿ ಸರಯು ಎಂಬಲ್ಲಿ ದೋಣಿ ಮುಳುಗಿ 18 ಮಂದಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಯಿದೆ. ನೀರಿನಲ್ಲಿ ಮುಳುಗಿದವರಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ. ದೋಣಿಯಲ್ಲಿದ್ದವರು ಪರ್ವಾಲ್ ಕೃಷಿ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಅಧಿಕಾರಿಗಳು ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲಾ ಜನರು ಸಣ್ಣ ದೋಣಿಯಲ್ಲಿ ಹಿಂತಿರುಗುತ್ತಿದ್ದರು, ನೀರಿನ ಬಲವಾದ ಅಲೆಯು ದೋಣಿಗೆ ಬಡಿದ ನಂತರ ಪಲ್ಟಿಯಾಗಿದೆ.
ಜಿಲ್ಲೆಯ ಡಿಎಂ, ಎಸ್ಪಿ, ಎಸ್‌ಡಿಎಂ ಸೇರಿದಂತೆ ಎಲ್ಲಾ ಆಡಳಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನದಿಯಲ್ಲಿ ಶೋಧ ಕಾರ್ಯಾಚರಣೆಗೆ ಆದೇಶಿಸಿದ್ದಾರೆ.
ಇದೇ ವೇಳೆ ರಾತ್ರಿಯಾಗುತ್ತಿದ್ದಂತೆ ರಕ್ಷಣಾ ಕಾರ್ಯಕ್ಕೆ ಹಿನ್ನಡೆಯಾಗಿದೆ. ಘಟನೆ ನಡೆದ ಘಾಟ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಸ್ಥಳೀಯ ಗ್ರಾಮಸ್ಥರು ಸಹ ಶೋಧ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡಿದ್ದಾರೆ.