
ಬೆಂಗಳೂರು : ಆಯುಷ್ ಆಸ್ಪತ್ರೆಗಳಲ್ಲಿ ತಾತ್ಕಲಿಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಜ್ಞ ವೈದ್ಯರ ಸೇವೆ ಕಾಯಂಗೊಳಿಸಲು ಅವಕಾಶವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯುಷ್ ವೈದ್ಯರ ಕಾಯಂಗೊಳಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲ,ಆದರೆ ನೇಮಕಾತಿ ವೇಳೆ ಅವರ ಸೇವೆಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ತಜ್ಞ ವೈದ್ಯರ ಹುದ್ದೆಗಳ ಸಂಪೂರ್ಣವಾಗಿ ತಾತ್ಕಲಿಕವಾಗಿರುತ್ತವೆ. ಅವರ ಸೇವೆಯನ್ನು ಕಾಯಂಗೊಳಿಸಲು ಈಗಿನ ನಿಯಮಾವಳಿಯ ಪ್ರಕಾರ ಆಗುವುದಿಲ್ಲ. ವೈದ್ಯಧೀಕಾರಿಗಳ ಹುದ್ದೆಗಳ ಭರ್ತಿ ವೇಳೆ ಆಯುಷ ವೈದ್ಯರಿಗೆ ಕೃಪಾಂಕ ಅಥವಾ ವಯೋಮಿತಿ ಸಡಿಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.