BIGG NEWS : ಶಿಕ್ಷಕರ ವರ್ಗಾವಣೆಗೆ `ಕೌನ್ಸಲಿಂಗ್’ ವೇಳಾ ಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು :2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಿಭಾಗೀಯ ಮಟ್ಟದ ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ಆನ್‍ಲೈನ್ ಮೂಲಕ ನಡೆಸಲು ಪರಿಷ್ಕೃತ ವರ್ಗಾವಣೆ ವೇಳಾ ಪಟ್ಟಿ ಪ್ರಕಟಿಸಲಾಗಿದೆ.

ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಹಾಗೂ ಅಂತಿಮ ಪಟ್ಟಿಯಲ್ಲಿರುವ ಶಿಕ್ಷಕರ ಕೌನ್ಸಲಿಂಗ್‍ನ್ನು ಇದೇ ಜುಲೈ 18 ರಿಂದ ಜುಲೈ 25 ರವರಗೆ ಶಿಕ್ಷಕರ ಸದನ ಕೆಂಪೆಗೌಡ ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ.

2022-23ನೇ ಸಾಲಿನ ಬೆಂಗಳೂರು ವಿಭಾಗೀಯ ಹಂತದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕ ವೃಂದದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಯ ಕೌನ್ಸಿಲಿಂಗ್‌ನ್ನು, ವರ್ಗಾವಣೆ ಆದ್ಯತಾ ಪಟ್ಟಿಯಲ್ಲಿರುವ ಅರ್ಹ ಶಿಕ್ಷಕ ವೃಂದದವರಿಗೆ ಸ್ಥಳ ಆಯ್ಕೆಗಾಗಿ ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಂಗಳೂರು ಇಲ್ಲಿ ಕೆಳಗೆ ನಮೂದಿಸಿರುವ ದಿನಾಂಕಗಳಂತೆ ಆಯಾ ದಿನ: ಪೂರ್ವಾಹ್ನ 9.30 ಗಂಟೆಯಿಂದ ಕೆಳಕಂಡ ಆಧ್ಯತಾ ಪಟ್ಟಿ ಕ್ರಮ ಸಂಖ್ಯೆಯಲ್ಲಿರುವ ಶಿಕ್ಷಕರುಗಳಿಗೆ ಕೌನ್ಸಿಲಿಂಗ್‌ ನಡೆಸಲಾಗುತ್ತದೆ.

ಸದರಿ ಕೌನ್ಸಿಲಿಂಗ್‌ಗೆ ಹಾಜರಾಗುವ ಶಿಕ್ಷಕರುಗಳು ಕೌನ್ಸಲಿಂಗ್‌ ಕ್ರಮ ಸಂಖ್ಯೆ ಆದ್ಯತಾನುಸಾರ ನಿಗಧಿಪಡಿಸಿದ ದಿನಾಂಕದಂದು ಸಂಬಂಧಿಸಿದ ಶಿಕ್ಷಕರು ನಿಗಧಿತ ಸಮಯದೊಳಗೆ ಕೌನ್ಸಿಲಿಂಗ್‌ಗೆ ಹಾಜರಾಗತಕ್ಕದ್ದು.

ಶಿಕ್ಷಕರ ವರ್ಗಾವಣೆಗೆ ಕೌನ್ಸಲಿಂಗ್ ವೇಳಾಪಟ್ಟಿ ಇಲ್ಲಿದೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read