ನವದೆಹಲಿ: ಭಾರತೀಯ ಜನತಾ ಪಕ್ಷ (BJP) 2024ರ ಲೋಕಸಭೆ ಚುನಾವಣೆಗಾಗಿ ಭರ್ಜರಿ ಸಿದ್ದತೆ ನಡೆಸಿದ್ದು, ಇದಕ್ಕಾಗಿ ತನ್ನ ರಾಷ್ಟ್ರೀಯ ತಂಡವನ್ನು ಪ್ರಕಟಿಸಿದೆ. ಛತ್ತೀಸ್ ಗಢದ ಡಾ.ರಮಣ್ ಸಿಂಗ್, ರಾಜಸ್ಥಾನದ ವಸುಂಧರಾ ರಾಜೆ, ಜಾರ್ಖಂಡ್ ನ ರಘುಬರ್ ದಾಸ್, ಉತ್ತರ ಪ್ರದೇಶದ ಲಕ್ಷ್ಮೀಕಾಂತ್ ಬಾಜಪೇಯಿ ಮತ್ತು ತಾರಿಕ್ ಮನ್ಸೂರ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬಿ.ಎಲ್.ಸಂತೋಷ್ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ದಾರಿ ನೀಡಲಾಗಿದೆ. ಅದೇ ಸಮಯದಲ್ಲಿ, ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಲಕ್ನೋದ ಶಿವ ಪ್ರಕಾಶ್ ಅವರಿಗೆ ನೀಡಲಾಗಿದೆ. ಮಹಾರಾಷ್ಟ್ರದ ಪಂಕಜಾ ಮುಂಡೆ, ಬಿಹಾರದ ರಿತುರಾಜ್ ಸಿನ್ಹಾ, ಉತ್ತರ ಪ್ರದೇಶದ ಸುರೇಂದ್ರ ಸಿಂಗ್ ನಗರ್ ಮತ್ತು ಮಧ್ಯಪ್ರದೇಶದ ಓಂ ಪ್ರಕಾಶ್ ಧುರ್ವೆ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಒಟ್ಟು 13 ನಾಯಕರಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.
ಸಂಜಯ್ ಬಂಡಿ ಮತ್ತು ರಾಧಾ ಮೋಹನ್ ಅಗರ್ವಾಲ್ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಲಾಗಿದೆ. ಉತ್ತರ ಪ್ರದೇಶದ ರಾಧಾ ಮೋಹನ್ ಅಗರ್ವಾಲ್, ರಾಜಸ್ಥಾನದ ಸುನಿಲ್ ಬನ್ಸಾಲ್ ಮತ್ತು ಮಧ್ಯಪ್ರದೇಶದ ಕೈಲಾಶ್ ವಿಜಯವರ್ಗಿಯಾ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿಯನ್ನು ನೀಡಲಾಗಿದೆ. ಒಟ್ಟು 8 ನಾಯಕರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಲಾಗಿದೆ.