alex Certify BIGG NEWS : ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್ : `7 ನೇ ವೇತನ ಆಯೋಗದ’ ಗಡುವು ಮತ್ತೆ 6 ತಿಂಗಳು ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್ : `7 ನೇ ವೇತನ ಆಯೋಗದ’ ಗಡುವು ಮತ್ತೆ 6 ತಿಂಗಳು ವಿಸ್ತರಣೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, 7 ನೇ ವೇತನದ ಆಯೋಗದ ಗಡುವು 6 ತಿಂಗಳು ವಿಸ್ತರಿಸಿದೆ. ಈ ಮೂಲಕ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಸರ್ಕಾರಿ ನೌಕರರಿಗೆ ಮತ್ತೆ ಶಾಕ್ ನೀಡಿದೆ.

ಸರ್ಕಾರಿ ನೌಕರರಿಗೆ ಸದ್ಯಕ್ಕೆ ವೇತನ ಹೆಚ್ಚಳದ ಭಾಗ್ಯ ಸಿಗುತ್ತಿಲ್ಲ. ರಾಜ್ಯ ಸರ್ಕಾರವು  7 ನೇ ವೇತನ ಆಯೋಗದ ಗಡುವು ಮತ್ತೆ 6 ತಿಂಗಳು ವಿಸ್ತರಿಸಿದೆ.  ವೇತನ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ನೌಕರರಿಗೆ ರಾಜ್ಯ ಸರ್ಕಾರದ ನಿಲುವು ನಿರಾಸೆ ಮೂಡಿಸಿದೆ.

ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಣೆಗೆ ಬಿಜೆಪಿ ಸರ್ಕಾರವು 2022 ರ ನವೆಂಬರ್ 19 ರಂದು  ಒಂದು ಆಯೋಗವನ್ನು ರಚನೆ ಮಾಡಿತ್ತು. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಈ ಆಯೋಗ ರಚನೆಯಾಗಿತ್ತು. 6 ತಿಂಗಳಲ್ಲಿ ವರದಿ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿತ್ತು. ನವೆಂಬರ್ 19 ಕ್ಕೆ ಆಯೋಗದ ಅವಧಿ ಅಂತ್ಯ ವಾಗಲಿದೆ.  ಆದರೆ ಇದರ ಮಧ್ಯೆ ಈ ಅವಧಿಯನ್ನು ಮತ್ತೆ 6 ತಿಂಗಳು ಕಾಲ ಸರ್ಕಾರ ಹೆಚ್ಚು ಮಾಡಿದೆ. ಹೀಗಾಗಿ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...