ಬೆಂಗಳೂರಿನ 15 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡು
ಬೆಂಗಳೂರು : ಬೆಂಗಳೂರಿನಲ್ಲಿ 15 ಕ್ಕೂ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಆತಂಕದಿಂದ ಪೋಷಕರು ಶಾಲೆಗಳಿಗೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯೆ ನೀಡಿದ್ದು, ಕಳೆದ ವರ್ಷ ಇದೇ ರೀತಿ 30 ಇಮೇಲ್ ಬಂದಿತ್ತು, ಇದೀಗ ಮತ್ತೆ 15 ಶಾಲೆಗಳಿಗೆ ಕರೆ ಬಂದಿದೆ. ಈಗಾಗಲೇ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳದ ಸಿಬ್ಬಂದಿ , ಪೊಲೀಸರು ಶಾಲೆಗಳಿಗೆ ದೌಡಾಯಿಸಿ ತಪಾಸಣೆ ನಡೆಸುತ್ತಿದ್ದಾರೆ.ಶಾಲೆಯ ಶೌಚಾಲಯ, ಕೊಠಡಿ, ತರಗತಿ, ಸ್ಟಾಫ್ ರೂಮ್ ಸೇರಿದಂತೆ ಎಲ್ಲಾ ಕಡೆ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಇದು ಹುಸಿ ಬೆದರಿಕೆಯಾಗಿದೆ. ಪೋಷಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದರು.
ಇಮೇಲ್ ಮೂಲಕ ಕಿಡಿಗೇಡಿಗಳು ಬೆಂಗಳೂರು ನಗರದ ನ್ಯಾಪಲ್, ವಿದ್ಯಾಶಿಲ್ಪ, ಬಸವೇಶ್ವರನಗರ, ಯಲಹಂಕ ಸೇರಿದಂತೆ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆಯೊಡ್ಡಿದ್ದಾರೆ.