ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರ ಖಾತೆಗೆ ಮಾಸಿಕ 2,000 ರೂ. ಜಮಾ ಮಾಡಲಾಗುತ್ತಿದ್ದು, ಈಗಾಗಲೇ ಮೊದಲ ಕಂತಿನ ಹಣ ಜಮಾ ಆಗಿದೆ. ಇದೀಗ 2ನೇ ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರ ಸಜ್ಜಾಗಿದೆ.
ಮೂಲಗಳ ಪ್ರಕಾರ ಸಂಪೂರ್ಣವಾಗಿ ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಅರ್ಹರಾಗಿದ್ದ ಎಲ್ಲಾ ಮಹಿಳೆಯರು ಕೂಡ ಹಣ ಪಡೆಯುವವರೆಗೂ ಕೂಡ ಎರಡನೇ ಕಂತಿನ ಹಣ ಬಿಡುಗಡೆಯಾಗುವುದಿಲ್ಲವಂತೆ.
ಮೊದಲನೇ ಕಂತಿನ ಹಣ ಸಂಪೂರ್ಣ ಬಿಡುಗಡೆಯಾಗುವರೆಗೂ ಎರಡನೇ ಕಂತಿನ ಹಣ ಬಿಡುಗಡೆಯಾಗುವುದಿಲ್ಲವಂತೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ 8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎನ್ನಲಾಗಿದೆ.
ಇನ್ನೂ ಯೋಜನೆಯ ಹಣ ಬಾರದೇ ಇದ್ದವರು ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಕಂತಿನ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ. ಇ-ಕೆವೈಸಿ ಮಾಡದ ಕಾರ್ಡ್ಗಳಿಗೆ ಗೃಹ ಲಕ್ಷ್ಮೀ ಹಣ ಜಮೆ ಆಗಿಲ್ಲ ಹೀಗಾಗಿ ಹತ್ತಿರದಲ್ಲಿರುವ ಯಾವುದೇ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ದಾಖಲೆಯನ್ನು ಕೊಟ್ಟು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ.