BIG NEWS: DCP ಕಾರಿನಲ್ಲಿದ್ದ ಡಿಎಸ್ ಸಿ ಕೀ ಕಳ್ಳತನ

ಬೆಂಗಳೂರು: ಸಂಚಾರಿ ವಿಭಾಗದ ಡಿಸಿಪಿ ಡಾ.ಸುಮನ್ ಪನ್ನೇಕರಚ ಅವರ ಕಾರಿನಲ್ಲಿದ್ದ ಡಿಎಸ್ ಸಿ ಕೀ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಉಪ್ಪಾರಪೇಟೆ ಬಳಿ ಇರುವ ಬಿಬಿಎಂಪಿ ಕಚೇರಿ ಬಳಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಡಾ.ಸುಮನ್ ಪನ್ನೇಕರಚ ಅವರ ಕಾರಿನಲ್ಲಿದ್ದ ಇ ತಂತ್ರಾಂಶದ ಸಹಿಗೆ ಬಳಸುವ ಡಿಎಸ್ ಸಿ ಕೀ ಕಳ್ಳತನವಾಗಿದೆ.

ಡಿಸಿಪಿ ಡಾ.ಸುಮನ್, ಖಾಸಗಿ ಕಾರಿನಲ್ಲಿ ಬಿಬಿಎಂಪಿ ಕಚೇರಿ ಬಳಿ ಬಂದಿದ್ದರು. ಕೀಯನ್ನು ಕಾರಿನ ಸೀಟ್ ಮೇಲೆ ಬಿಟ್ಟಿದ್ದರು. ಕಾರನ್ನು ಲಾಕ್ ಮಾಡಲು ಮರೆತು ಕಚೇರಿಗೆ ತೆರಳಿದ್ದಾರೆ. ಈ ವೇಳೆ ಕಳ್ಳರು ಕೀ ಕದ್ದು ಎಸ್ಕೇಪ್ ಆಗಿದ್ದಾರೆ. ಡಿಸಿಪಿಯವರು ಕಾರಿನ ಬಳಿ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read