ನವದೆಹಲಿ: ಕರ್ನಾಟಕ, ಪಶ್ಚಿಮ ಬಂಗಾಳದ 13 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಲಾಗಿದೆ. 820 ಕೋಟಿ ಅಕ್ರಮ ವಹಿವಾಟು ಹಿನ್ನೆಲೆಯಲ್ಲಿ ಕೊಲ್ಕತ್ತಾ, ಮಂಗಳೂರಿನಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಬ್ಯಾಂಕ್ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ ನಿವಾಸಗಳ ಮೇಲೆ ದಾಳಿ ನಡೆದಿದೆ. ಸಿಬಿಐ ದಾಳಿ ವೇಳೆ ಮೊಬೈಲ್, ಲ್ಯಾಪ್ಟಾಪ್ ಕಂಪ್ಯೂಟರ್ ಗಳು, ವಶಕ್ಕೆ ಪಡೆಯಲಾಗಿದೆ. ಯುಕೋ ಬ್ಯಾಂಕ್ ನಿಂದ ಅನಾಮಿಕ ವ್ಯಕ್ತಿಗಳ ಮೇಲೆ ಆರೋಪ ಮಾಡಿ ದೂರು ದಾಖಲಿಸಿದ್ದರು.
ಐಎಂಪಿಎಸ್ ಮೂಲಕ 820 ಕೋಟಿ ರೂ. ವಹಿವಾಟು ನಡೆದ ಆರೋಪ ಕೇಳಿ ಬಂದಿದೆ. ನವೆಂಬರ್ 10 ರಿಂದ 13 ನೇ ತಾರೀಖಿನೊಳಗೆ ಈ ವಹಿವಾಟು ನಡೆದಿತ್ತು. ಈ ಬಗ್ಗೆ ದೂರು ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.