ನವದೆಹಲಿ : ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಮೂವರು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್ ಮತ್ತು ರೇಣುಕಾ ಸಿಂಗ್ ಸರುತಾ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.
ಕೃಷಿ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರಿಗೆ ವಹಿಸಿದ್ದಾರೆ. ಶೋಭಾ ಕರಂದ್ಲಾಜೆ ಅವರಿಗೆ ಆಹಾರ ಸಂಸ್ಕರಣಾ ಖಾತೆ, ರಾಜೀವ್ ಚಂದ್ರಶೇಖರ್ ಅವರಿಗೆ ಜಲಶಕ್ತಿ ಮತ್ತು ಭಾರತಿ ಪ್ರವೀಣ್ ಪವಾರ್ ಅವರಿಗೆ ಬುಡಕಟ್ಟು ವ್ಯವಹಾರಗಳ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ಸೇರಿದಂತೆ ಹತ್ತು ಬಿಜೆಪಿ ಸಂಸದರು ಬುಧವಾರ ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ಕಿರೋನಿಲಾಲ್ ಮೀನಾ ರಾಜ್ಯಸಭಾ ಸದಸ್ಯರಾಗಿದ್ದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಒಂಬತ್ತು ಬಿಜೆಪಿ ಸಂಸದರ ರಾಜೀನಾಮೆಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದ್ದರು. ಅವರೆಲ್ಲರೂ ಬುಧವಾರ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ರಾಜಸ್ಥಾನದ ಜೈಪುರ ಗ್ರಾಮೀಣದಿಂದ ರಾಜ್ಯವರ್ಧನ್ ರಾಥೋಡ್, ರಾಜ್ಸಮಂದ್ನಿಂದ ದಿಯಾ ಕುಮಾರಿ, ಮಧ್ಯಪ್ರದೇಶದ ಮೊರೆನಾದಿಂದ ನರೇಂದ್ರ ಸಿಂಗ್ ತೋಮರ್, ದಾಮೋಹ್ನಿಂದ ಪ್ರಹ್ಲಾದ್ ಪಟೇಲ್, ಜಬಲ್ಪುರದಿಂದ ರಾಕೇಶ್ ಸಿಂಗ್, ಸಿಧಿಯಿಂದ ರಿತಿ ಪಾಠಕ್, ಹೋಶಂಗಾಬಾದ್ನಿಂದ ಉದಯ್ ಪ್ರತಾಪ್ ಸಿಂಗ್, ಛತ್ತೀಸ್ಗಢದ ರಾಯ್ಗಢದಿಂದ ಗೋಮತಿ ಸಾಯಿ ಮತ್ತು ಬಿಲಾಸ್ಪುರದ ಅರುಣ್ ಸಾವೊ ರಾಜೀನಾಮೆ ನೀಡಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಸದನಕ್ಕೆ ತಿಳಿಸಿದರು.