ಬೆಂಗಳೂರು: ಭಾರತೀಯ ರೈಲ್ವೆ ಇಂದು ಸಂಚರಿಸಬೇಕಿದ್ದ 242 ರೈಲುಗಳನ್ನು ದಿಢೀರ್ ರದ್ದು ಮಾಡಿದೆ.
ಕೆಲವು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ 242 ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರತಿ ವಾರ, ರೈಲ್ವೆ ಇಲಾಖೆಯು ಮೂಲಸೌಕರ್ಯ ನಿರ್ವಹಣೆ ಮತ್ತು ಸುರಕ್ಷತೆಯ ಕಾಳಜಿಗಾಗಿ ಕೆಲ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ರೈಲು ಸಂಚಾರ ರದ್ದುಗೊಳಿಸಲಾಗಿದೆ.
ಮಾರ್ಚ್ 9 ರಂದು ಸಂಪೂರ್ಣವಾಗಿ ರದ್ದುಗೊಂಡ ಕೆಲವು ರೈಲುಗಳಲ್ಲಿ ನಿಜಾಮಾಬಾದ್-ಪುಣೆ ಎಕ್ಸ್ ಪ್ರೆಸ್, ದೌಂಡ್-ನಿಜಾಮಾಬಾದ್ ಎಕ್ಸ್ ಪ್ರೆಸ್ ಸೇರಿದಂತೆ 242 ರೈಲು ಸಂಚಾರ ರದ್ದಾಗಿದ್ದು, ಐ ಆರ್ ಸಿ ಟಿ ಸಿ ವೆಬ್ ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್ ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಹಾಗೂ ಬಳಕೆದಾರರ ಖಾತೆಯಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ. ಕೌಂಟರ್ ಮೂಲಕ ಟಿಕೆಟ್ ಕಾಯ್ದಿಸಿದವರು ಮರುಪಾವತಿ ಪಡೆಯಲು ಕೌಂಟರ್ ಗೆ ಭೇಟಿ ನೀಡಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.