ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ಕಳವಳವುಂಟಾಗಿದೆ ಎಂದು ಬಿಜೆಪಿ ಟಾಂಗ್ ನೀಡಿದೆ.
ಜೆ.ಪಿ.ನಡ್ಡಾ ಆಗಮನ ಕಾಂಗ್ರೆಸ್-ಜೆಡಿಎಸ್ ನವರಿಗೆ ಸಹಜವಾಗಿಯೇ ಕಳವಳವಾಗಿರುವುದರಿಂದ, ತಮ್ಮ ಟೂಲ್ ಕಿಟ್‌ಗಳನ್ನು ಹೊರ ತೆಗೆದು ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲು ಧಾರಾಳವಾಗಿ ಪ್ರಯತ್ನಿಸಬಹುದು ಎಂದು ವ್ಯಂಗ್ಯವಾಡಿದೆ.
ಈಗಾಗಲೇ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆಯ 24ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವನ್ನು ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿಯನ್ನು ತಡೆಯಬೇಕಾದ್ದು ವಿರೋಧ ಪಕ್ಷಗಳು ಅಗತ್ಯವಾಗಿ ಮಾಡಲೇ ಬೇಕಾದ ಕರ್ಮ. ಆದರೆ ಇದು ಅವರ ವಿಫಲಯತ್ನವಾಗುವುದಂತೂ ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ಮತ್ತು ಜೆಡಿಎಸ್‌ನವರ ಟೂಲ್‌ಕಿಟ್‌ಗಳು ಸಹಜವಾಗಿ ಪ್ರಾದೇಶಿಕತೆ, ಭಾಷೆ, ಜಾತಿ, ಧರ್ಮಗಳನ್ನು ಅವಲಂಬಿಸಿದ್ದು ಇಂಥದ್ದೇ ಯಾವುದಾದರೂ ಸುಳ್ಳು ಸುದ್ದಿಗಳನ್ನು ಹರಿಬಿಡುವುದನ್ನೇ ನಾವು ಎದುರು ನೋಡುತ್ತಿದ್ದೇವೆ. ಆದರೆ ಅವೆಲ್ಲಕ್ಕೂ ನಮ್ಮ ಒಂದೇ ಉತ್ತರವಾಗಿ ನಾವು ಮಾತಾಡಲ್ಲ, ರಾಜ್ಯದ ಅಭಿವೃದ್ಧಿ ಮಾತಾಡುತ್ತದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ, ತುಮಕೂರಿನಲ್ಲಿ ಆಗಿರುವ ಅಭಿವೃದ್ಧಿಯನ್ನು ಕಾಂಗ್ರೆಸ್ಸು ಕನಸ್ಸಲ್ಲೂ ಕಾಣುವುದಕ್ಕಾಗುವುದಿಲ್ಲ. ಹಾಗೇ ಚಿತ್ರದುರ್ಗದಲ್ಲಿ 1,96,093 ಮನೆಗಳಿಗೆ ಕುಡಿಯುವ ನೀರು ಪೂರೈಕೆ ಎಂಬುದೆಲ್ಲ ಏನೆಂದೂ ಜಾತಿಹುಳು ಜೆಡಿಎಸ್‌ನ ಜಡಮಂಡೆಗೆ ಅರ್ಥವೂ ಆಗುವುದಿಲ್ಲ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಮ್ಮ ಒಂದೇ ಒಂದು ಕೋರಿಕೆಯೇನೆಂದರೆ, ಧಾವಂತದಲ್ಲಿ ನಂದಿನಿ-ಅಮುಲ್ ಬಗ್ಗೆ ಸುಳ್ಳಾಡಿದಂತೆ ಮತ್ತೊಮ್ಮೆ ಸುಳ್ಳಾಡಿ, ಉಳಿದಿರುವ ನಿಮ್ಮ ಅಲ್ಪ ಸ್ವಲ್ಪ ಮರ್ಯಾದೆಯನ್ನೂ ತೆಗೆದುಕೊಳ್ಳಬೇಡಿ. ಸುಳ್ಳು ನಾಳೆಯೂ ಆಡಬಹುದು, ಮರ್ಯಾದೆ ಮತ್ತೆ ಬರುವುದಿಲ್ಲ ಎಂದು ಸರಣಿ ಟ್ವೀಟ್ ಮೂಲಕ ಗುಡುಗಿದೆ.
https://twitter.com/BJP4Karnataka/status/1610826430908358657
https://twitter.com/BJP4Karnataka/status/1610826273282195459
https://twitter.com/BJP4Karnataka/status/1610826171872325632
https://twitter.com/BJP4Karnataka/status/1610826089504583684