ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ನಡುವೆ ಹೊಸ ವಾರ್ ಶುರುವಾಗಿದೆ. ರೋಪಿಣಿ ಸಿಂಧೂರಿ ವಿರುದ್ಧ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ಡಿ. ರೂಪಾ ಇದೀಗ ಫೋಟೋ ಬಾಂಬ್ ಸಿಡಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೋಗಳನ್ನು ಪೋಸ್ಟ್ ಮಾಡಿರುವ ಡಿ. ರೂಪಾ, ರೋಹಿಣಿ ಅವರು ಇಂತಹ ಹಲವು ಫೋಟೋಗಳನ್ನು ಅಧಿಕಾರಿಗಳಿಗೆ ಕಳುಹಿಸುತ್ತಾರೆ ಇದರ ಉದ್ದೇಶವೇನು? ಪದೇ ಪದೇ ಕೆಲ ಖಾಸಗಿ ಫೋಟೋಗಳನ್ನು ಪುರುಷ ಐಎಎಸ್ ಅಧಿಕಾರಿಗಳಿಗೆ ಕಳುಹಿಸುತ್ತಿದ್ದಾರೆ. ಅಲ್ಲದೇ ಈಗ ಶಾಸಕ ಸಾ.ರಾ. ಮಹೇಶ್ ಜೊತೆ ಸಂಧಾನಕ್ಕೆ ಹೋಗಿದ್ದಾದರೂ ಯಾಕೆ? ಎಂದು ಕಿಡಿಕಾರಿದ್ದಾರೆ.
ರೋಹಿಣಿ ಸಿಂಧೂರಿ ಅವರ ಕೆಲ ಫೋಟೋಗಳನ್ನು ಹರಿಬಿಟ್ಟಿರುವ ಡಿ.ರೂಪಾ, ಸಾ.ರಾ. ಮಹೇಶ್ ವಿರುದ್ಧ ಕೇಸ್ ಹಾಕಿದಾಗ ನಾವು ಕೂಡ ರೋಹಿಣಿ ಅವರನ್ನು ಬೆಂಬಲಿಸಿದ್ದೆವು. ಆದರೆ ಈಗ ರಾಜಿ ಸಂಧಾನಕ್ಕೆ ಹೋಗಿದ್ದಾರೆ. ರಾಜಿ ಸಂಧಾನಕ್ಕೆ ಹೋಗುವ ಅಗತ್ಯವೇನಿತ್ತು? ಐಎಎಸ್ ಅಧಿಕಾರಿಯಾಗಿ ರಾಜಕಾರಣಿಗಳ ಜೊತೆ ಸಂಧಾನಕ್ಕೆ ಯಾಕೆ ಹೋಗಬೇಕು ? ರೋಹಿಣಿ ಏನಾದರೂ ಭ್ರಷ್ಟಾಚಾರ ಮಾಡಿದ್ದಾರಾ ? ಕರ್ತವ್ಯ ಲೋಪ ಮಾಡಿದ್ದಾರಾ ? ತಪ್ಪು ಮಾಡಿಲ್ಲ ಎಂದ ಮೇಲೆ ಸಂಧಾನ ಮಾಡಿಕೊಳ್ಳುತ್ತಿರುವುದು ಯಾಕೆ ? ಈಗ ತಮ್ಮ ಕೆಲ ಖಾಸಗಿ ಫೋಟೀಗಳನ್ನು ಐಎಎಸ್ ಅಧಿಕರಿಗಳಿಗೆ ಕಳುಹಿಸುತ್ತಿರುವುದು ಯಾಕೆ ? ಇಂತಹ ಫೋಟೋಗಳನ್ನು ಕಳುಹಿಸುತ್ತಿರುವುದರ ಅರ್ಥವೇನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಮಹಿಳೆ ಪುರುಷ ಅಧಿಕಾರಿಗಳಿಗೆ ಈ ರೀತಿ ಪದೇ ಪದೇ ಫೋಟೋ ಕಳುಹಿಸುವುದು ಯಾಕೆ? ಅವರ ನಡವಳಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿ ಎಂದು ಹಿಗ್ಗಾಮುಗ್ಗಾ ಆರೋಪಗಳನ್ನು ಮಾಡಿದ್ದಾರೆ.