ಭಾರತದಲ್ಲಿ ಶನಿವಾರದಂದು 97 ದಿನಗಳ ಬಳಿಕ ಇದೇ ಮೊದಲ ಬಾರಿಗೆ 300 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕದಲ್ಲೂ ಶನಿವಾರ ಒಂದೇ ದಿನ 95 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪರೀಕ್ಷೆ ಮಾಡಿದ 3,888 ಮಂದಿಯ ಪೈಕಿ 95 ಮಂದಿಗೆ ಸೋಂಕು ತಗುಲಿದೆ. ಇದರಿಂದಾಗಿ ಪಾಸಿಟಿವಿಟಿ ದರ ಶೇ.2.44 ಆದಂತಾಗಿದೆ.
ಈ ಮೊದಲು ಪಾಸಿಟಿವಿಟಿ ದರ ಶೇಕಡ 1ರಿಂದ ಶೇಕಡಾ 1.5ರ ಆಸುಪಾಸಿನಲ್ಲಿದ್ದು ಇದೀಗ ಏರಿಕೆಯಾಗಿದೆ. ರಾಜ್ಯದಲ್ಲಿ 391 ಸಕ್ರಿಯ ಪ್ರಕರಣಗಳಿದ್ದು, ಶನಿವಾರ ಪತ್ತೆಯಾದ 95 ಪ್ರಕರಣಗಳ ಪೈಕಿ 79 ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಿಂದಲೇ ವರದಿಯಾಗಿವೆ.