ಮೈಸೂರು: ಮೀನು ಹಿಡಿಯಲು ಹೋಗಿದ್ದಾಗ ಕೆಸರಿನಲ್ಲಿ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಬಳ್ಳೆ ಹಾಡಿ ನಿವಾಸಿ ಮಾಸ್ತಿ (30) ಮೃತ ವ್ಯಕ್ತಿ. ಐವರು ಸೇರಿ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ. ಅವರನ್ನು ಕಂಡು ಭಯಗೊಂಡು ಓಡುತ್ತಿದ್ದಾಗ ಮಾಸ್ತಿ ಎಂಬಾತ ಹಿನ್ನೀರಿನ ಕೆಸರಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಘಟನೆ ನಡೆದಿದೆ. ಅತರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.