ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗಾಗಿ 5 ಕೋಟಿ ಯೋಜನೆ ಸಿದ್ಧಪಡಿಸಿದ್ದೇನೆ. ಇಡೀ ಜಗತ್ತೇ ನಮ್ಮ ಕಡೆ ನೋಡುವಂತಾಗಬೇಕು ಎಂದು ಮಾಜಿ ಸಚಿವ ಜನಾರ್ಧನ ರೆಡ್ದಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜನಾರ್ಧನ ರೆಡ್ಡಿ, ಯಾರ ಮೇಲೂ ಪ್ರತಿಕಾರ ತೀರಿಸಿಕೊಳ್ಳಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿಲ್ಲ. ಒಂದು ತಿಂಗಳ ಕೂಸು ರಾಜ್ಯದ ಎಲ್ಲಾ ಪಕ್ಷಗಳ ನಿದ್ದೆಗೆಡಿಸಿದೆ ಎಂದು ಹೇಳಿದರು.
ಸುಮಾರು 12 ವರ್ಷಗಳ ಕಾಲ ವನವಾಸ ಅನುಭಸಿದ್ದೇನೆ, ನನ್ನ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಾನು ಯಾರಿಗೂ ಹೆದರಲ್ಲ, ಯಾರಿಗೂ ಬಗ್ಗಲ್ಲ. ನಾನು ನನ್ನ ಗುರಿ ಯನ್ನು ಮುಟ್ಟೇ ಮುಟ್ಟುತ್ತೇನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ಹನುಮ ಹುಟ್ಟಿದ ನಾಡು ಅಂಜನಾದ್ರಿ ಅಭಿವೃದ್ಧಿಗಾಗಿ 5 ಕೋಟಿ ಯೋಜನೆ ಸಿದ್ಧಪಟಿಸಿದ್ದೇನೆ. ಗಂಗಾವತಿಯಲ್ಲಿ 200 ಬೆಡ್ ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ. ರಾಜ್ಯದ 10-15 ಜಿಲ್ಲೆಗಳ ಜನರು ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಜನರ ಶಕ್ತಿ ನನಗೆ ಆನೆ ಬಲ ತರುತ್ತಿದೆ. ನಿಮ್ಮ ಕೆಲಸಕ್ಕಾಗಿ ಇನ್ಮೇಲೆ ನೀವು ಬೆಂಗಳೂರಿಗೆ ಅಲೆಯಬೇಕಾಗಿಲ್ಲ. ನನಗೆ ಅಧಿಕಾರವನ್ನು ನೀಡಿ, ಶಾಸಕನನ್ನಾಗಿ ಆಯ್ಕೆ ಮಾಡಿ, ಮಂತ್ರಿ, ಶಾಸಕರನ್ನು ನಿಮ್ಮ ಬೀದಿಗೆ ತರುತ್ತೇನೆ. ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡುತ್ತೇನೆ ಎಂದು ಹೇಳಿದರು.