ಬೆಂಗಳೂರು: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯಿಸಿ ನಾಳೆ ಒಕ್ಕಲಿಗರ ಸಂಘದಿಂದ ಕರೆ ನೀಡಲಾಗಿದ್ದ ಜಾಥಾ ರದ್ದುಗೊಳಿಸಲಾಗಿದೆ.
ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂಬ ಉದ್ದೇಶಕ್ಕೆ ನಾಳೆ ಒಕ್ಕಲಿಗರ ಸಂಘದಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಜಾಥಾ ರದ್ದುಗೊಂಡಿದೆ.
ನಾಳೆ ಹಮ್ಮಿಕೊಳ್ಳಲಾಗಿದ್ದ ಹೋರಾಟವನ್ನು ರದುಗೊಳಿಸಲಾಗಿದೆ ಎಂದು ಕಿಮ್ಸ್ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದ ಅಧ್ಯಕ್ಷ ಉಮಾಪತಿ ತಿಳಿಸಿದ್ದಾರೆ.