ನವದೆಹಲಿ : ವಾರಣಾಸಿ ನ್ಯಾಯಾಲಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಜ್ಞಾನವಾಪಿ ಮಸೀದಿ ವರದಿ ಸಲ್ಲಿಸಿದೆ.
ಜ್ಞಾನವಾಪಿ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಮೀಕ್ಷೆ ಕಾರ್ಯವನ್ನ ಜುಲೈ 24ರಂದು ಪ್ರಾರಂಭಿಸಿತ್ತು. ಇಂದು ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಡಿಸೆಂಬರ್ 11, 2023ರಂದು, ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಅವಿನಾಶ್ ಮೊಹಾಂತಿ ಅವರ ಅನಾರೋಗ್ಯದ ಕಾರಣದಿಂದಾಗಿ ಅವರು ನ್ಯಾಯಾಲಯಕ್ಕೆ ಹಾಜರಾಗಿ ವರದಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹೇಳಿತ್ತು. ವಾರಣಾಸಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ಒಂದು ವಾರ ಕಾಲಾವಕಾಶ ನೀಡಿತ್ತು ಮತ್ತು ವರದಿಯನ್ನು ಸಲ್ಲಿಸಲು ಡಿಸೆಂಬರ್ 18 ರ ದಿನಾಂಕವನ್ನು ನಿಗದಿಪಡಿಸಿತ್ತು. ಹೀಗಾಗಿ ಇಂದು ಭಾರತೀಯ ಪುರಾತತ್ವ ಇಲಾಖೆಯು ಸಮೀಕ್ಷಾ ವರದಿಯನ್ನು ಸಲ್ಲಿಸಿದೆ.
ಜ್ಞಾನವಾಪಿ ಪ್ರಕರಣದಲ್ಲಿ ಎಎಸ್ಐ ವರದಿಯ ಬಗ್ಗೆ ಮಾತನಾಡಿದ ಎಎಸ್ಐ ಹೆಚ್ಚುವರಿ ಸ್ಥಾಯಿ ವಕೀಲ ರಾಹುಲ್ ಮಿಶ್ರಾ, “ನ್ಯಾಯಾಲಯವು ಎಲ್ಲಾ ಕಡೆಯ ವಾದಗಳನ್ನು ಆಲಿಸಿದೆ. ಡಿಸೆಂಬರ್ 21 ರಂದು ನ್ಯಾಯಾಲಯವು ಸಮಗ್ರ ಆದೇಶವನ್ನು ನೀಡಲಿದೆ. ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಿದ ನಂತರ, ಎಎಸ್ಐ ತನ್ನ ಸಂಶೋಧನೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ.