alex Certify ರೈತರಿಗೆ ಪಿಎಂ ಕಿಸಾನ್ ಹಣ ದ್ವಿಗುಣ, ದೀರ್ಘಾವಧಿಗೆ ಕಡಿಮೆ ಬಡ್ಡಿ ದರದ ಕೃಷಿ ಸಾಲ ನೀಡಲು ಒತ್ತಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಪಿಎಂ ಕಿಸಾನ್ ಹಣ ದ್ವಿಗುಣ, ದೀರ್ಘಾವಧಿಗೆ ಕಡಿಮೆ ಬಡ್ಡಿ ದರದ ಕೃಷಿ ಸಾಲ ನೀಡಲು ಒತ್ತಾಯ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡುತ್ತಿರುವ ಹಣವನ್ನು ದ್ವಿಗುಣಗೊಳಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಶನಿವಾರ ರೈತ ಸಂಘಟನೆಗಳು, ಕೃಷಿ ಅರ್ಥಶಾಸ್ತ್ರಜ್ಞರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ಸಭೆ ನಡೆಸಲಾಗಿದೆ.

ಸಭೆಯಲ್ಲಿ ಕೇಂದ್ರ ಸರ್ಕಾರದ ಮುಂದೆ ರೈತ ಸಂಘಟನೆಗಳು ತಮ್ಮ ಬೇಡಿಕೆ ಮಂಡಿಸಿದ್ದು, ರೈತರಿಗೆ ಧೀರ್ಘಾವಧಿಗೆ ಕಡಿಮೆ ಬಡ್ಡಿ ದರದ ಕೃಷಿ ಸಾಲ ಸೌಲಭ್ಯ ಕಲ್ಪಿಸಬೇಕು. ಕೃಷಿ ಉಪಕರಣಗಳ ಮೇಲೆ ಜಿ.ಎಸ್.ಟಿ. ದರ ಕಡಿತಗೊಳಿಸಬೇಕು. ಪಿಎಂ ಕಿಸಾನ್ ಹಣ ದ್ವಿಗುಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ಕೃಷಿಕ ಸಮಾಜದ ಅಧ್ಯಕ್ಷ ಅಜಯ್ ವೀರ್ ಖಜರ್ ಮಾತನಾಡಿ, ಕೃಷಿ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಬೇಕು. ಪಿಎಂ ಕಿಸಾನ್ ಯೋಜನೆಯಡಿ ವಾರ್ಷಿಕ 6 ಸಾವಿರ ರೂ. ನೀಡುತ್ತಿದ್ದು, ಇದನ್ನು 12 ಸಾವಿರ ರೂ.ಗೆ ಹೆಚ್ಚಿಸಬೇಕು. ಸಣ್ಣ ರೈತರಿಗೆ ಶೂನ್ಯ ದರದಲ್ಲಿ ಬೆಳೆ ವಿಮೆ ಸೌಲಭ್ಯ ಕಲ್ಪಿಸಬೇಕು. ಕೃಷಿ ಉಪಕರಣ, ರಸಗೊಬ್ಬರ, ಬಿತ್ತನೆ ಬೀಜ, ಔಷಧಗಳ ಮೇಲಿನ ಜಿಎಸ್‌ಟಿ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ, ಹಣಕಾಸು ಕಾರ್ಯದರ್ಶಿ, ಡಿಐಪಿಎಎಂ ಕಾರ್ಯದರ್ಶಿ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಕೂಡ ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...