ವಾಷಿಂಗ್ಟನ್: ಇರಾನ್ ದಾಳಿಯ ವಿರುದ್ಧ ಇಸ್ರೇಲ್‌ನ ರಕ್ಷಣೆಗೆ ನೆರವು ನೀಡುವಂತೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಅಮೆರಿಕ ಸೇನೆಗೆ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ಇಸ್ರೇಲಿಗಳನ್ನು ಗುರಿಯಾಗಿಸಿಕೊಂಡ ಇರಾನ್ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾಗಿ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ ತಿಳಿಸಿದೆ. ಲೆಬನಾನ್ ಮತ್ತು ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ತೀವ್ರ ಉಲ್ಬಣದಲ್ಲಿ ಇಸ್ರೇಲ್ ಮೇಲೆ ಇರಾನ್ ಸುಮಾರು 200 ಕ್ಷಿಪಣಿಗಳನ್ನು ಉಡಾಯಿಸಿದ ಹಿನ್ನಲೆಯಲ್ಲಿ ಅಮೆರಿಕ ಅಧ್ಯಕ್ಷರಿಂದ ಈ ನಿರ್ದೇಶನ ಬಂದಿದೆ.
ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ “ಶ್ವೇತಭವನದ ಪರಿಸ್ಥಿತಿ ಕೊಠಡಿಯಿಂದ ಇಸ್ರೇಲ್ ವಿರುದ್ಧ ಇರಾನ್ ದಾಳಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ತಂಡದಿಂದ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ ಎಂದು NSC ವಕ್ತಾರ ಸೀನ್ ಸಾವೆಟ್ ಹೇಳಿದ್ದಾರೆ.
ಇರಾನಿನ ದಾಳಿಗಳ ವಿರುದ್ಧ ಇಸ್ರೇಲ್‌ನ ರಕ್ಷಣೆಗೆ ಸಹಾಯ ಮಾಡಲು ಮತ್ತು ಇಸ್ರೇಲ್ ಅನ್ನು ಗುರಿಯಾಗಿಸುವ ಕ್ಷಿಪಣಿಗಳನ್ನು ಹೊಡೆದುರುಳಿಸಲು ಬಿಡೆನ್ ಯುಎಸ್ ಮಿಲಿಟರಿಗೆ ನಿರ್ದೇಶಿಸಿದ್ದಾರೆ ಎಂದು ಅವರು ಹೇಳಿದ್ದಾರೆ.