
ವಿಜಯಪುರ: ಭೀಮಾತೀರದ ಹಂತಕ ಭಾಗಪ್ಪ ಹರಿಜನ ಹತ್ಯೆ ಪ್ರಕರಾಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಿಂಟ್ಯಾ ಅಗರಖೇಡ್ (25) @ಪ್ರಕಾಶ್ , ರಾಹುಲ್ ತಳಕೇರಿ (20), ಮಣಿಕಂಠ ದನಕೊಪ್ಪ(27) ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳು. ವಿಜಯಪುರದ ಗಾಂಧಿಚೌಕ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವಿಜಯಪುರ ಎಸ್ ಪಿ ಲಕ್ಷ್ಮಣ್ ನಿಂಬಾಳ್ಕರ್ ತಿಳಿಸಿದ್ದಾರೆ.
ವಿಜಯಪುರದ ಮದೀನಾ ನಗರದಲ್ಲಿ ಎರಡು ದಿನಗಳ ಹಿಂದೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯಿಂದ ವಿಜಯಪುರ ಜಿಲೆ ಬೆಚ್ಚಿಬಿದ್ದಿತ್ತು.