
ಬೆಂಗಳೂರು : ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ರಂತೆ, ವನ್ಯಪ್ರಾಣಿಗಳ ಹಾಗು ಅವುಗಳ ವಸ್ತುಗಳ ವ್ಯಾಪಾರ ವನ್ಯಜೀವಿಗಳನ್ನು ಬೇಟೆ ಆಡುವುದು, ಸ್ವಾಧೀನಪಡಿಸಿಕೊಳ್ಳುವುದು, ಇಟ್ಟುಕೊಳ್ಳುವುದು, ಸಾಕುವುದು, ಖರೀದಿಸುವುದು, ಸಾಗಣೆ ಮಾಡುವುದು, ವ್ಯಾಪಾರ ಮಾಡುವುದು, ಮಾಂಸ ಮಾರಾಟ/ಭಕ್ಷಣೆ ಮಾಡಿದ್ರೆ 3ರಿಂದ 7 ವರ್ಷ ಜೈಲು ಮತ್ತು 1ಲಕ್ಷ ರೂಪಾಯಿ ವರೆಗೂ ದಂಡ ವಿಧಿಸಲಾಗುತ್ತದೆ.
ವನ್ಯಜೀವಿಗಳ ವಸ್ತುಗಳು, ಟ್ರೋಫಿಗಳು, ಕೊಂಬು, ಚರ್ಮ, ಉಗುರು, ಗೊರಸು, ಹಲ್ಲು ಅಥವಾ ವನ್ಯಜೀವಿಗಳ ವಸ್ತುಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳ ವ್ಯವಹಾರ, ಉಡುಗೊರೆ ಪಡೆದುಕೊಳ್ಳುವುದು, ಖರೀದಿಸುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು, ಇನ್ನೊಬ್ಬರಿಗೆ ವರ್ಗಾಯಿಸುವುದು, ವನ್ಯಪ್ರಾಣಿಗಳ ಚರ್ಮದ ಬಳಕೆ, ಉಗುರು, ಕೂದಲು ಹಲ್ಲಿನಿಂದ ಮಾಡಿದ ಅಭರಣದ ಬಳಕೆ, ಅಪರಾಧ ಉಲ್ಲಂಘಿಸಿದರೆ, 3ರಿಂದ 7 ವರ್ಷ ಜೈಲು ಮತ್ತು 1ಲಕ್ಷ ರೂಪಾಯಿ ವರೆಗೂ ದಂಡ ವಿಧಿಸಲಾಗುತ್ತದೆ.
