ಉಪ್ಪಿಗಿಂತ ರುಚಿ ಬೇರೆ ಇಲ್ಲ. ಪ್ರತಿಯೊಂದು ಆಹಾರಕ್ಕೂ ಉಪ್ಪು ಬೇಕೇಬೇಕು. ಉಪ್ಪು ಆಹಾರಕ್ಕೊಂದೆ ಅಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು.
ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ. ಇದನ್ನು ಸಾಲ್ಟ್ ವಾಟರ್ ಬಾತ್ ಎಂದೂ ಕರೆಯುತ್ತಾರೆ.
ಸೋಂಕು : ಬೇಸಿಗೆ ಸಮಯದಲ್ಲಿ ಬೆವರಿನಿಂದಾಗಿ ಶರೀರದಲ್ಲಿ ತುರಿಕೆ ಹಾಗೂ ಸೋಂಕು ಕಾಣಿಸಿಕೊಳ್ಳುತ್ತದೆ. ಇದ್ರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಪ್ರತಿದಿನ ಸ್ನಾನ ಮಾಡುವ ನೀರಿಗೆ ಚಿಟಕಿ ಉಪ್ಪು ಬೆರೆಸಿ ಸ್ನಾನ ಮಾಡಿ.
ಸ್ನಾಯುಗಳ ನೋವು : ಸ್ನಾಯುಗಳು ದುರ್ಬಲವಾಗಿದ್ದರೆ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸಾಲ್ಟ್ ವಾಟರ್ ಬಾತ್ ಹೇಳಿ ಮಾಡಿಸಿದ ಔಷಧಿ. ಇದ್ರಿಂದ ಕೀಲು ನೋವು ಗುಣಮುಖವಾಗಿ ನೆಮ್ಮದಿ ಸಿಗುತ್ತದೆ.
ಕೀಟಗಳ ಅಲರ್ಜಿ : ಸೊಳ್ಳೆ ಸೇರಿದಂತೆ ವಿಷಕಾರಿ ಕೀಟಗಳು ಕಚ್ಚಿದಾಗ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಜೊತೆಗೆ ಚರ್ಮದ ಮೇಲೆ ಕಲೆ ಉಳಿದುಬಿಡುತ್ತದೆ. ಇದ್ರಿಂದ ರಕ್ಷಣೆ ಪಡೆಯಲು ಉಪ್ಪು ಮಿಶ್ರಿತ ನೀರು ಒಳ್ಳೆಯದು.
ಮಾನಸಿಕ ಒತ್ತಡ : ದಿನವಿಡಿ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರು ರಾತ್ರಿ ಮಲಗುವ ಮೊದಲು ಉಪ್ಪು ನೀರಿನಲ್ಲಿ ಸ್ನಾನ ಮಾಡಿದ್ರೆ ಮಾನಸಿಕ ಒತ್ತಡ ಕಡಿಮೆಯಾಗಿ ಸುಖ ನಿದ್ರೆ ನಿಮ್ಮದಾಗುತ್ತದೆ.