ಬೆಂಗಳೂರಿನ ಕೆಫೆಯೊಂದರಲ್ಲಿ ನಡೆದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯೊಬ್ಬರು ಕೆಫೆಯಲ್ಲಿ ಝೂಮ್ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ನಾಪ್‌ಕಿನ್‌ನಲ್ಲಿ ಶಬ್ದದ ಬಗ್ಗೆ ದೂರು ಬರೆದು ಅವರ ಟೇಬಲ್ ಮೇಲೆ ಇಟ್ಟಿದ್ದಾರೆ.
“ನಾನು ಕೆಫೆಯಲ್ಲಿ ಕೆಲಸ ಮಾಡುತ್ತಿದ್ದೆ, ಝೂಮ್ ಕಾಲ್‌ನಲ್ಲಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ನಾಪ್‌ಕಿನ್‌ನಲ್ಲಿ ಬರೆದು ನನ್ನ ಟೇಬಲ್ ಮೇಲೆ ಹಾಕಿದ. ಅದು ಫೋನ್ ನಂಬರ್ ಅಲ್ಲ, ಶಬ್ದ ದೂರು. ಅವಮಾನವಾಯಿತು” ಎಂದು ಮಹಿಳೆ ಎಕ್ಸ್ (ಟ್ವಿಟ್ಟರ್) ನಲ್ಲಿ ಬರೆದಿದ್ದಾರೆ.
ಈ ಘಟನೆಯಿಂದ ಕೆಫೆಗಳು ಕೆಲಸದ ಸ್ಥಳವಾಗಬೇಕೇ ಅಥವಾ ಬೇಡವೇ ಎಂಬ ಚರ್ಚೆ ಆರಂಭವಾಗಿದೆ. ಕೆಲವರು ಕೆಫೆ ಸಾರ್ವಜನಿಕ ಸ್ಥಳ, ಅಲ್ಲಿ ಝೂಮ್ ಮೀಟಿಂಗ್‌ಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ದೂರು ನೀಡಿದ ವ್ಯಕ್ತಿಯ ಪರವಾಗಿ ನಿಂತಿದ್ದಾರೆ. ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಗೌಪ್ಯ ಮಾಹಿತಿಯನ್ನು ಚರ್ಚಿಸುವ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವಾಗ ವಹಿಸಬೇಕಾದ ಜಾಗರೂಕತೆಯ ಬಗ್ಗೆ ಬೆಳಕು ಚೆಲ್ಲಿದೆ.