
ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬ ಮುಖಾಮುಖಿಯಾಗುತ್ತಿವೆ. ಎರಡು ತಂಡಗಳು ಜಯದ ಹುಡುಕಾಟದಲ್ಲಿದ್ದು, ಪ್ಲೇ ಆಫ್ ಪ್ರವೇಶಿಸುವುದು ಎರಡು ತಂಡಗಳ ಗುರಿಯಾಗಿದೆ.
ಯು ಮುಂಬ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಇದರಿಂದ ಹೊರಬರಲು ನೋಡುತ್ತಿದ್ದಾರೆ. ಬೆಂಗಳೂರು ಬುಲ್ಸ್ ತಂಡದಲ್ಲಿ ಅನುಭವಿ ಆಟಗಾರರ ಕಳಪೆ ಪ್ರದರ್ಶನ ಮುಂದುವರೆದಿದ್ದು, ಯುವ ಪ್ರತಿಭೆಗಳು ಮಿಂಚುತ್ತಿದ್ದಾರೆ.
ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ತಮಿಳ್ ತಲೈವಾಸ್ ಸೆಣಸಾಡಲಿದ್ದು, ಈ ತಂಡಗಳು ಕೂಡ ಪ್ಲೇ ಆಫ್ ರೇಸ್ ನಲ್ಲಿವೆ. ಕಳೆದ ಬಾರಿ ಸೆಮಿ ಫೈನಲ್ ಪ್ರವೇಶಿಸಿದ್ದ ತಮಿಳ್ ತಲೈವಾಸ್ ತಂಡ ಈ ಬಾರಿಯೂ ಎಂಟ್ರಿ ಕೊಡಲಿದೆಯಾ ಎಂಬುದನ್ನು ಕಾದುನೋಡಬೇಕಾಗಿದೆ.
ಪ್ರೊ ಕಬಡ್ಡಿ ಇನ್ನೇನು ಅಂತಿಮ ಘಟ್ಟ ತಲುಪಿದ್ದು, ಕಳೆದ ಬಾರಿ ಚಾಂಪಿಯನಾಗಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಈಗಾಗಲೇ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ. ಫೆಬ್ರವರಿ 26ರಂದು ಎಲಿಮಿನೇಟರ್ ಪಂದ್ಯಗಳಿವೆ. ಇದಾದ ಬಳಿಕ ಫೆಬ್ರವರಿ 28ಕ್ಕೆ ಸೆಮಿ ಫೈನಲ್ ನಡೆಯಲಿದ್ದು, ಮಾರ್ಚ್ ಒಂದರಂದು ಫೈನಲ್ ನಡೆಯಲಿದೆ.