ಬೆಂಗಳೂರು: ಬೆಂಗಳೂರಿನಲ್ಲಿ ಎರಡು ಕಾರ್ ಗಳ ನಡುವೆ ಡಿಕ್ಕಿಯಾಗಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತಿ ವೇಗವಾಗಿ ಬಂದು ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರ್ ಏರ್ಪೋರ್ಟ್ ಕಡೆಗೆ ಹೋಗುತ್ತಿದ್ದ ಮತ್ತೊಂದು ಕಾರ್ ಗೆ ಡಿಕ್ಕಿ ಹೊಡೆದಿದೆ.
ಕಾರ್ ನಲ್ಲಿದ್ದ ಶೇಕ್ ಮಹಮ್ಮದ್ ಸಾವನ್ನಪ್ಪಿದ್ದು, ಮೂವರು ಸ್ನೇಹಿತರಿಗೆ ಗಾಯಗಳಾಗಿವೆ. ಸ್ನೇಹಿತರ ಜೊತೆಗೆ ಮೃತ ಶೇಕ್ ಮಹಮ್ಮದ್ ಹೊರಗೆ ಹೋಗಿದ್ದರು. ಮತ್ತೊಂದು ಕಾರ್ ನಲ್ಲಿದ್ದ ಲಕ್ಷ್ಮಿ, ನರೇಂದ್ರ ಹಾಗೂ ಬಾಲಕಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.