alex Certify ಸುಖಕರ ಪ್ರವಾಸಕ್ಕೆ ಮನೆಯಿಂದ ಹೊರಡುವ ಮುನ್ನ ತಪ್ಪದೇ ಮಾಡಿ ಜ್ಯೋತಿಷ್ಯದಲ್ಲಿನ ಕೆಲವು ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖಕರ ಪ್ರವಾಸಕ್ಕೆ ಮನೆಯಿಂದ ಹೊರಡುವ ಮುನ್ನ ತಪ್ಪದೇ ಮಾಡಿ ಜ್ಯೋತಿಷ್ಯದಲ್ಲಿನ ಕೆಲವು ಪರಿಹಾರ

ಪ್ರವಾಸ ಹೋಗೋದು ಅಂದ್ರೆ ಬಹುತೇಕ ಎಲ್ಲರಿಗೂ ಪ್ರಿಯವಾದ ಕೆಲಸ. ಕೆಲವೊಮ್ಮೆ ರಜಾದಿನಗಳನ್ನು ಎಂಜಾಯ್‌ ಮಾಡಲು ಪ್ರವಾಸ ಹೋಗ್ತೇವೆ. ಇನ್ನು ಕೆಲವು ಬಾರಿ ಕಚೇರಿ ಕೆಲಸದ ನಿಮಿತ್ತ, ಕೌಟುಂಬಿಕ ಕಾರಣಗಳಿಗೆ ಪ್ರವಾಸ ಮಾಡಬೇಕಾಗಿ ಬರುತ್ತದೆ.

ಇವುಗಳ ಪೈಕಿ ಕೆಲವು ಪ್ರಯಾಣಗಳು ಸಿಹಿ ನೆನಪುಗಳಾಗಿ ಉಳಿದುಕೊಂಡ್ರೆ ಇನ್ನು ಕೆಲವು ದುಸ್ವಪ್ನಗಳಂತೆ ಕಾಡುತ್ತವೆ. ಪ್ರಯಾಣದಲ್ಲಿ ತೊಂದರೆ ಅಥವಾ ಅಹಿತಕರ ಘಟನೆಗಳನ್ನು ತಪ್ಪಿಸಲು ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳನ್ನು ನೀಡಲಾಗಿದೆ. ಪ್ರತಿ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಈ ಕ್ರಮಗಳನ್ನು ಅನುಸರಿಸಿ.

ಪ್ರಯಾಣ ಹೊರಡುವ ಮೊದಲು ಗಾಯತ್ರಿ ಮಂತ್ರವನ್ನು ಪಠಿಸಿ. ಇದು ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸುತ್ತದೆ ಮತ್ತು ನಿಮ್ಮ ಕೆಲಸಗಳಲ್ಲಿ  ಯಶಸ್ಸನ್ನು ಪಡೆಯುತ್ತೀರಿ. ಪ್ರಯಾಣ ಆರಂಭಿಸುವ ಮುನ್ನ ಗಣೇಶನನ್ನು ಪೂಜಿಸುವುದು ಸೂಕ್ತ. ವಿಘ್ನ ನಿವಾರಕ ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ.

ಪ್ರಯಾಣಕ್ಕೂ ಮೊದಲು ಹವಾಮಾನ ಅಥವಾ ಪ್ರಕೃತಿಗೆ ಸಂಬಂಧಿಸಿದಂತೆ ಕೆಟ್ಟ ನುಡಿಗಳನ್ನು ಆಡಬೇಡಿ. ಹಾಗೆ ಮಾಡುವುದು ಅಶುಭ. ಪ್ರವಾಸಕ್ಕೆ ಹೋಗುವ ಮೊದಲು, ನಿಮ್ಮ ಇಷ್ಟ ದೇವರನ್ನು ನೆನಪಿಸಿಕೊಳ್ಳಿ. ಒಂದು ಚಮಚ ಮೊಸರು ಸಕ್ಕರೆ ತಿಂದು ಹೊರಡುವುದು ಸೂಕ್ತ.

ಇದು ಪ್ರಯಾಣವನ್ನು ಮಂಗಳಕರವಾಗಿಸುತ್ತದೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಪ್ರವಾಸ ಪೂರ್ಣಗೊಳ್ಳುತ್ತದೆ. ನೀವು ದೂರದ ಧಾರ್ಮಿಕ ಪ್ರದೇಶಕ್ಕೆ ಹೋಗುತ್ತಿದ್ದರೆ ಪ್ರಯಾಣಕ್ಕೂ ಮೊದಲು ಹನುಮಂತನ ದೇವಸ್ಥಾನದಲ್ಲಿ ಚೋಳವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ.

ನೀವು ಪ್ರಯಾಣ ಹೊರಟ ಸಂದರ್ಭದಲ್ಲಿ ಆಭರಣ ಧರಿಸಿರುವ ಸುಮಂಗಲಿ ನಿಮ್ಮ ಕಣ್ಣಿಗೆ ಬಿದ್ದರೆ ಒಳ್ಳೆಯದು. ನೀರು ತುಂಬಿದ ಕಲಶ, ಮಡಕೆ, ಹಸು ಕರುವಿಗೆ ಮೇವು ನೀಡುವುದನ್ನು ನೋಡುವುದು ಕೂಡ ಅತ್ಯಂತ ಶ್ರೇಯಸ್ಕರ. ಪ್ರವಾಸಕ್ಕೆ ಹೋದಾಗ ನೀವು ರಾತ್ರಿ ಎಲ್ಲೇ ತಂಗಿದ್ದರೂ ಸರಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...