ಮಳೆಗಾಲದಲ್ಲಿ ಹಾವುಗಳ ಹಾವಳಿ ಹೆಚ್ಚಿರುತ್ತದೆ. ಯಾವುದೇ ಪ್ರದೇಶಕ್ಕೆ ಹೋದ್ರೂ ಹಾವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕಾಡು, ಮನೆ ಸುತ್ತಮುತ್ತ ಮಾತ್ರವಲ್ಲ ಶೌಚಾಲಯದಲ್ಲೂ ಹಾವು ಪತ್ತೆಯಾಗ್ತಿರುತ್ತದೆ. ಈಗ ಇಂದೋರ್‌ನ ಗಾಂಧಿನಗರ ಪ್ರದೇಶದ ಮನೆಯೊಂದರಲ್ಲಿ ಇಂಥ ಘಟನೆ ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ಮೂರು ನಾಗರ ಹಾವುಗಳು ಪತ್ತೆಯಾಗಿವೆ.
ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡು ಹಾವುಗಳನ್ನು ರಕ್ಷಿಸಲಾಗಿದೆ. ಆದರೆ ಮೂರನೇ ಹಾವಿನ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಅದು ಶೌಚಾಲಯದಲ್ಲಿಯೇ ಇದೆ ಎನ್ನುವ ಅನುಮಾನವಿದೆ.
ಮಾಹಿತಿ ಪ್ರಕಾರ, ಗಾಂಧಿನಗರದ ಅರಿಹಂತ್ ನಗರ ವಿಸ್ತರಣೆಯ ನಿವಾಸಿ ಮಹೇಶ್ ಕ್ಷತ್ರಿಯ ಮನೆಯ ಶೌಚಾಲಯದಲ್ಲಿ ಹಾವು ಕಾಣಿಸಿಕೊಂಡಿತ್ತು. ಮಹೇಶ್, ಪತ್ನಿ ಕುಸುಮ ಹಾಗೂ 8 ತಿಂಗಳ ಮಗಳೊಂದಿಗೆ ವಾಸವಾಗಿದ್ದಾರೆ.
ಘಟನೆ ಆಗಸ್ಟ್ 12ರ ರಾತ್ರಿ 10.30ಕ್ಕೆ ನಡೆದಿದೆ. ಶೌಚಾಲಯಕ್ಕೆ ಹೋಗಿದ್ದ ಕುಸುಮಾ ಮೊದಲು ಹಾವನ್ನು ನೋಡಿದ್ದಾರೆ. ಟಾಯ್ಲೆಟ್ ಸೀಟ್ ಮೇಲೆ ಹಾವು ಸುತ್ತಿಕೊಂಡಿರುವುದನ್ನು ಕಂಡು ಭಯಗೊಂಡಿದ್ದಾರೆ. ತಕ್ಷಣ ಮಹೇಶ್, ಹಾವು ತಜ್ಞರಿಗೆ ಕರೆ ಮಾಡಿದ್ದು, ಅಲ್ಲಿಗೆ ಬಂದ ತಜ್ಞರು ಸುಮಾರು 5 ಅಡಿ ಉದ್ದದ ಹಾವನ್ನು ರಕ್ಷಿಸಿದ್ದಾರೆ. ಮೂರು ದಿನಗಳ ನಂತರ ಮತ್ತೆರಡು ನಾಗರಹಾವು ಪತ್ತೆಯಾಗಿದೆ.
https://twitter.com/DSourceInsight/status/1805237342065787337?ref_src=twsrc%5Etfw%7Ctwcamp%5Etweetembed%7Ctwterm%5E1805237342065787337%7Ctwgr%5Ed2f6b73c48c40700c8dc5c09588253e357fcfe12%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Findorehorrorthreecobrasfoundemergingfromtoiletseatingandhinagartworescuedonestillmissingwatch-newsid-n627062092