ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಸೇರಿದಂತೆ ಆರು ಮಂದಿ ಐಎಎಸ್ ಅಧಿಕಾರಿಗಳಿಗೆ ಬಿಬಿಎಂಪಿಯಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಾಗಿ ಮುನೀಶ್ ಮೌದ್ಗಿಲ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರಾಗಿ ವಿನೋತ್ ಪ್ರಿಯಾ, ಯಲಹಂಕ ವಲಯ ಆಯುಕ್ತರಾಗಿ ಕರಿಗೌಡ, ಪೂರ್ವ ವಲಯ ಆಯುಕ್ತರಾಗಿ ಆರ್. ಸ್ನೇಹಲ್, ದಾಸರಹಳ್ಳಿ ವಲಯ ಆಯುಕ್ತರಾಗಿ ಪ್ರೀತಿ ಗೆಹ್ಲೊಟ್, ಮಹದೇವಪುರ ವಲಯ ಆಯುಕ್ತರಾಗಿ ಇಬ್ರಾಹಿಂ ಮೈಗೂರು ಅವರನ್ನು ನೇಮಕ ಮಾಡಲಾಗಿದೆ.