ಬೆಂಗಳೂರು: ಬೆಂಗಳೂರು ನಗರದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಕಟ್ಟಡಗಳು ಹಾಗೂ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲು ವಲಯ ಆಯುಕ್ತರಿಗೆ ಜವಾಬ್ದಾರಿ ನೀಡಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಮಂಜೂರಾಗುವ ಕಟ್ಟಡ ನಕ್ಷೆಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತದೆ. ಈ ನಕ್ಷೆ ಮಂಜೂರಾದ 30 ದಿನಗಳೊಳಗೆ ಕಟ್ಟಡ ಮಾಲೀಕರು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ʼಬಿಲ್ಡಿಂಗ್ ಪ್ಲಿಂಥ್ ಲೈನ್ʼ ಅನ್ನು ನಗರ ಯೋಜನೆ ಅಧಿಕಾರಿಗಳು ಗುರುತು ಮಾಡಿಕೊಡಬೇಕು. ಅದನ್ನು ಕೇಂದ್ರ ಹಾಗೂ ವಲಯ ಕಚೇರಿಯ ಜಂಟಿ ನಿರ್ದೇಶಕರು ದೃಢೀಕರಿಸಬೇಕು.
ವಾರ್ಡ್‌ನಲ್ಲಿ ಕಿರಿಯ, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್‌ಗಳು ಮಂಜೂರಾದ ನಕ್ಷೆಯ ವಿವರ ಪಡೆದುಕೊಂಡು ಅದರ ಅನುಸಾರ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿರುವುದನ್ನು ಕಾಲಕಾಲಕ್ಕೆ ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.